ADVERTISEMENT

ಕೈಗಾರಿಕಾ ಉತ್ಪಾದನೆ ಶೇ 5.2

ಪಿಟಿಐ
Published 10 ಮಾರ್ಚ್ 2023, 20:17 IST
Last Updated 10 ಮಾರ್ಚ್ 2023, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇ 5.2ರಷ್ಟು ಬೆಳವಣಿಗೆ ಕಂಡಿದೆ. 2022ರ ಡಿಸೆಂಬರ್‌ನಲ್ಲಿ ಶೇ 4.7ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ ಜನವರಿಯಲ್ಲಿ ಉತ್ಪಾದನೆಯು ಶೇ 0.5ರಷ್ಟು ಹೆಚ್ಚಾಗಿದೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ವಲಯದ ಬೆಳವಣಿಗೆಯು 2022ರ ಜನವರಿಯಲ್ಲಿ ಶೇ 2ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಶೇ 3.2ರಷ್ಟು ಹೆಚ್ಚಾಗಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ತಯಾರಿಕಾ ವಲಯದ ಬೆಳವಣಿಗೆಯು 2022ರ ಜನವರಿಯಲ್ಲಿ ಶೇ 1.9ರಷ್ಟು ಇದ್ದಿದ್ದು ಈ ವರ್ಷದ ಜನವರಿಯಲ್ಲಿ ಶೇ 3.7ಕ್ಕೆ ಏರಿಕೆ ಆಗಿದೆ. ಗಣಿ ವಲಯದ ಬೆಳವಣಿಗೆ ಶೇ 3ರಿಂದ ಶೇ 8.8ಕ್ಕೆ ಮತ್ತು ವಿದ್ಯುತ್ ವಲಯದ ಬೆಳವಣಿಗೆ ಶೇ 0.9ರಿಂದ ಶೇ 12.7ರಷ್ಟು ಏರಿಕೆಯಾಗಿದೆ.

ADVERTISEMENT

ಹಣಕಾಸು ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ಐಐಪಿ ಶೇ 5.4ರಷ್ಟು ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 13.7ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.