ADVERTISEMENT

ಇನ್ಫೊಸಿಸ್‌ಗೆ ₹ 3,610 ಕೋಟಿ ನಿವ್ವಳ ಲಾಭ

₹ 8,260 ಕೋಟಿ ಷೇರು ಮರು ಖರೀದಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 20:00 IST
Last Updated 11 ಜನವರಿ 2019, 20:00 IST
ಸಲೀಲ್‌ ಪಾರೇಖ್‌
ಸಲೀಲ್‌ ಪಾರೇಖ್‌   

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ತೃತೀಯ ತ್ರೈಮಾಸಿಕದಲ್ಲಿ ₹ 3,610 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 5,129 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣ ಶೇ 30ರಷ್ಟು ಕಡಿಮೆಯಾಗಿದೆ. ತ್ರೈಮಾಸಿಕದಲ್ಲಿನ ವರಮಾನವು ವರ್ಷದ ಹಿಂದಿನ ₹ 17,794 ಕೋಟಿಗೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಳಗೊಂಡು ₹ 21,400 ಕೋಟಿಗೆ ತಲುಪಿದೆ.

ಷೇರು ಮರುಖರೀದಿ: ಮುಕ್ತ ಮಾರುಕಟ್ಟೆ (ಷೇರುಪೇಟೆ) ಮೂಲಕ ₹8,260 ಕೋಟಿ ಮೊತ್ತದ ಷೇರುಗಳನ್ನು ಮರು ಖರೀದಿಸಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಸಮ್ಮತಿ ನೀಡಿದೆ. ಪ್ರತಿ ಷೇರಿನ ಬೆಲೆ ₹ 800 ಮೀರದಂತೆ ಈ ಮರು ಖರೀದಿ ಪ್ರಕ್ರಿಯೆ ನಡೆಯಲಿದೆ.

ADVERTISEMENT

ಅಮೆರಿಕದ ಷೇರುಗಳನ್ನು (ಎಡಿಎಸ್‌) ಹೊಂದಿರುವವರು ಅವುಗಳನ್ನು ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಲು ಅನುಮತಿ ನೀಡಲಾಗಿದೆ. ಷೇರು ಮರುಖರೀದಿ ಸಂದರ್ಭದಲ್ಲಿ ‘ಎಡಿಎಸ್‌’ಗಳನ್ನು ಭಾರತದ ಷೇರುಪೇಟೆಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಸಂಸ್ಥೆಯ ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

ವಿಶೇಷ ಲಾಭಾಂಶ: ಪ್ರತಿ ಷೇರಿಗೆ ₹4ರಂತೆ ವಿಶೇಷ ಲಾಭಾಂಶವನ್ನೂ ಸಂಸ್ಥೆಯು ಘೋಷಿಸಿದೆ. ಇದರ ಒಟ್ಟಾರೆ ಮೊತ್ತ ₹ 2,107 ಕೋಟಿಗಳಷ್ಟು ಇರಲಿದೆ. ಇದೇ 28ಕ್ಕೆ ಈ ಲಾಭಾಂಶ ಪಾವತಿಸಲು ದಿನ ನಿಗದಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.