ADVERTISEMENT

ವಾರಕ್ಕೆ 70 ಗಂಟೆ ಕೆಲಸ: ನಾನು ಸತ್ತರೂ ಅದನ್ನೇ ಹೇಳೋದು.. ಇನ್ಫಿ ನಾರಾಯಣ ಮೂರ್ತಿ

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇದೀಗ ತಮ್ಮ ಹೇಳಿಕೆಯನ್ನು ಮತ್ತೆ ಪ್ರತಿಪಾದಿಸಿದ್ದಾರೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 5:22 IST
Last Updated 15 ನವೆಂಬರ್ 2024, 5:22 IST
<div class="paragraphs"><p>ನಾರಾಯಣ ಮೂರ್ತಿ</p></div>

ನಾರಾಯಣ ಮೂರ್ತಿ

   

ಬೆಂಗಳೂರು: ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇದೀಗ ತಮ್ಮ ಹೇಳಿಕೆಯನ್ನು ಮತ್ತೆ ಪ್ರತಿಪಾದಿಸಿದ್ದಾರೆ.

ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶೀಪ್ ಸಮ್ಮಿಟ್‌ನಲ್ಲಿ ಮಾತನಾಡಿರುವ ಅವರು 1986 ರಲ್ಲಿ ನನಗೆ ದೊಡ್ಡ ಶಾಕ್ ಆಗಿತ್ತು. ಆಗ ಭಾರತದಲ್ಲಿ ಐಟಿ ಹಾಗೂ ಇತರ ಕೆಲ ವಲಯಗಳಲ್ಲಿ ವಾರದ ಆರು ದಿನ ಬದಲು 5 ದಿನ ಕೆಲಸ ಮಾಡುವ ನೀತಿ ತರಲಾಯಿತು. ಇದರಿಂದ ನಾನು ವಿಚಲಿತನಾಗಿದ್ದೆ‘ ಎಂದು ಸ್ಮರಿಸಿದ್ದಾರೆ.

ADVERTISEMENT

‘ದಯವಿಟ್ಟು ಕ್ಷಮಿಸಿ. ಕೆಲಸದ ಅವಧಿ ಬಗ್ಗೆ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ‘ ಎಂದು ಪ್ರತಿಪಾದಿಸಿದ್ದಾರೆ.

ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಮೂಲಾಧಾರ. ಪ್ರಧಾನಿ ಮೋದಿ ಅವರು ವಾರಕ್ಕೆ 100 ಗಂಟೆವರೆಗೆ ಕೆಲಸ ಮಾಡುತ್ತಾರೆ. ಅವರಿಗೆ ಈ ದೇಶದ ಯುವಕರು ಮೆಚ್ಚುಗೆ ಸೂಚಿಸಬೇಕಾದರೆ ಅವರಂತೆಯೇ ವಾರಕ್ಕೆ ಕನಿಷ್ಠ 70 ತಾಸಾದರೂ ಕೆಲಸ ಮಾಡಬೇಕು ಎಂದಿದ್ದಾರೆ.

ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.30 ಕ್ಕೆ ಕಚೇರಿಯಲ್ಲಿ ಹಾಜರಿರುತ್ತಿದ್ದೆ. ರಾತ್ರಿ 8–30 ಕ್ಕೆ ಮನೆಗೆ ಹೊರಡುತ್ತಿದ್ದೆ. ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೆ. ಕಠಿಣ ಪರಿಶ್ರಮವು ನಮ್ಮ ಸಂಸ್ಕೃತಿಯಲ್ಲೇ ಇದೆ ಎಂದಿದ್ದಾರೆ.

ಜರ್ಮನಿ, ಜಪಾನ್ ದೇಶದವರು ಕಠಿಣ ಪರಿಶ್ರಮದಿಂದಲೇ ದೇಶ ಕಟ್ಟಿದರು. ಅದಕ್ಕೆ ಪರ್ಯಾಯ ಯಾವುದೂ ಇಲ್ಲ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ತಾಸು ಕೆಲಸ ಮಾಡಬೇಕು. ಅಂದಾಗ ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.