ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳ ಬೆಳವಣಿಗೆ ಸೆಪ್ಟೆಂಬರ್
ನಲ್ಲಿ ಶೇ 4.4 ರಿಂದ ಶೇ 4.2ಕ್ಕೆ ಇಳಿಕೆಯಾಗಿದೆ.
ಕಚ್ಚಾ ತೈಲ ಮತ್ತು ರಸಗೊಬ್ಬರ ಉತ್ಪಾದನೆ ತಗ್ಗಿರುವುದರಿಂದ ಬೆಳವಣಿಗೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಕಲ್ಲಿದ್ದಲು, ನೈಸರ್ಗಿಕ ಅನಿಲ, ವಿದ್ಯುತ್, ತೈಲಾಗಾರ ಉತ್ಪನ್ನಗಳು, ಉಕ್ಕು, ಸಿಮೆಂಟ್, ಕಚ್ಚಾ ತೈಲ ಮತ್ತು ರಸಗೊಬ್ಬರ, ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳಾಗಿವೆ.
ಕಚ್ಚಾತೈಲ ಮತ್ತು ರಸಗೊಬ್ಬರ ಉತ್ಪಾದನೆ ಕ್ರಮವಾಗಿ ಶೇ 3.7 ಮತ್ತು ಶೇ 5.3 ಕ್ಕೆ ಇಳಿಕೆಯಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಆಗಸ್ಟ್ ಅವಧಿಯಲ್ಲಿ ಈ ವಲಯಗಳ ಬೆಳವಣಿಗೆಯು ಶೇ 3 ರಿಂದ ಶೇ 5.5ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.