ADVERTISEMENT

8 ಕೈಗಾರಿಕಾ ವಲಯಗಳ ಬೆಳವಣಿಗೆ ಶೇ 5.8ಕ್ಕೆ ಏರಿಕೆ

ಪಿಟಿಐ
Published 31 ಮಾರ್ಚ್ 2022, 14:30 IST
Last Updated 31 ಮಾರ್ಚ್ 2022, 14:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೂಲಸೌಕರ್ಯ ವಲಯದ ಪ್ರಮುಖ ಎಂಟು ಕೈಗಾರಿಕೆಗಳ ಬೆಳವಣಿಗೆಯು 2022ರ ಫೆಬ್ರುವರಿಯಲ್ಲಿ ಶೇಕಡ 5.8ಕ್ಕೆ ತಲುಪಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ಇದು ಶೇ 3.3ರಷ್ಟು ಇತ್ತು. ಈ ವರ್ಷದ ಜನವರಿಯಲ್ಲಿ ಶೇ 4ರಷ್ಟು ಬೆಳವಣಿಗೆ ಕಂಡಿವೆ.

ಕಲ್ಲಿದ್ದಲು, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು ಮತ್ತು ಸಿಮೆಂಟ್‌ ಉದ್ಯಮಗಳ ಉತ್ತಮ ಬೆಳವಣಿಗೆಯಿಂದಾಗಿ ಈ ವರ್ಷದ ಫೆಬ್ರುವರಿಯಲ್ಲಿ ಈ ಪ್ರಮಾಣದ ಏರಿಕೆ ಸಾಧ್ಯವಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶದಲ್ಲಿ ಈ ಮಾಹಿತಿ ಇದೆ. ಅದರೆ, ಫೆಬ್ರುವರಿಯಲ್ಲಿ ಕಚ್ಚಾತೈಲ ಮತ್ತು ರಸಗೊಬ್ಬರ ಉತ್ಪಾದನೆ ಇಳಿಕೆ ಕಂಡಿದೆ.

ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳು 2021ರ ಏಪ್ರಿಲ್‌ನಿಂದ ಈ ವರ್ಷದ ಫೆಬ್ರುವರಿವರೆಗಿನ ಅವಧಿಯಲ್ಲಿ ಶೇ 11ರಷ್ಟು ಬೆಳವಣಿಗೆ ಕಂಡಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ (–)8.1ರಷ್ಟು ಕುಸಿತ ಕಂಡಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.