ADVERTISEMENT

ಇಪಿಎಫ್‌ | 21 ಲಕ್ಷ ನಿಷ್ಕ್ರಿಯ ಖಾತೆ; ಆರು ವರ್ಷದಲ್ಲಿ 5 ಪಟ್ಟು ಏರಿಕೆ

ಈ ಖಾತೆಯಲ್ಲಿನ ಒಟ್ಟು ಮೊತ್ತ ₹8,505 ಕೋಟಿ

ಪಿಟಿಐ
Published 25 ನವೆಂಬರ್ 2024, 12:57 IST
Last Updated 25 ನವೆಂಬರ್ 2024, 12:57 IST
ಇಪಿಎಫ್‌
ಇಪಿಎಫ್‌   

ನವದೆಹಲಿ: ನೌಕರರ ಭವಿಷ್ಯ ನಿಧಿಯಲ್ಲಿರುವ (ಇಪಿಎಫ್‌) ನಿಷ್ಕ್ರಿಯ ಖಾತೆಗಳಲ್ಲಿನ ಒಟ್ಟು ಮೊತ್ತವು ಕಳೆದ ಆರು ಹಣಕಾಸು ವರ್ಷಗಳಲ್ಲಿ 5 ಪಟ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.

2018–19ರ ಹಣಕಾಸು ವರ್ಷದಲ್ಲಿ ಈ ನಿಷ್ಕ್ರಿಯ ಖಾತೆಗಳ ಸಂಖ್ಯೆ 6.91 ಲಕ್ಷವಾಗಿದ್ದು, ಇದರಲ್ಲಿನ ಮೊತ್ತವು ₹1,638 ಕೋಟಿಯಷ್ಟಿತ್ತು. 2023–24ರಲ್ಲಿ ಖಾತೆಗಳ ಸಂಖ್ಯೆ 21.55 ಲಕ್ಷಕ್ಕೆ ಏರಿಕೆಯಾಗಿದ್ದು, ಒಟ್ಟು ಮೊತ್ತವು ₹8,505 ಕೋಟಿ ಆಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನೌಕರರ ಭವಿಷ್ಯ ನಿಧಿ (ಇಪಿಎಫ್‌) ಯೋಜನೆ 1952ರ ಪ್ರಕಾರ ಕೆಲ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ವರ್ಗೀಕರಿಸಲಾಗಿದೆ. ಈ ನಿಷ್ಕ್ರಿಯ ಖಾತೆಗಳಲ್ಲಿ ಇರುವ ಮೊತ್ತವನ್ನು ಇಪಿಎಫ್‌ಒ ಸಂಬಂಧಪಟ್ಟ ಫಲಾನುಭವಿಗಳಿಗೆ ಹಿಂದಿರುಗಿಸುತ್ತದೆ. ಸದಸ್ಯರು ಕ್ಲೇಮು ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಶೈಕ್ಷಣಿಕ ವಿಡಿಯೊಗಳು, ವೆಬಿನಾರ್‌ಗಳು, ಸಾಮಾಜಿಕ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಉದ್ಯೋಗಿಗಳಿಗೆ ಇಪಿಎಫ್‌ಒ ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.