ADVERTISEMENT

ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಪಿಟಿಐ
Published 28 ಜೂನ್ 2024, 13:35 IST
Last Updated 28 ಜೂನ್ 2024, 13:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜುಲೈ 1ರಿಂದ ಆರಂಭವಾಗುವ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು, ಯಥಾಸ್ಥಿತಿ ಕಾಯ್ದುಕೊಂಡಿದೆ.

2024–25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿಗದಿ‍ಪಡಿಸಿರುವ ಬಡ್ಡಿದರವು ಜುಲೈ 1ರಿಂದ ಸೆಪ್ಟೆಂಬರ್‌ 30ರ ವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಶುಕ್ರವಾರ ತಿಳಿಸಿದೆ.

ಪ್ರಸ್ತುತ ಸುಕನ್ಯಾ ಸಮೃದ್ಧಿ ಶೇ 8.2, ಪಿಪಿಎಫ್‌ ಶೇ 7.1, ಅಂಚೆ ಕಚೇರಿಯ ಉಳಿತಾಯ ಠೇವಣಿ ಶೇ 4, ಕಿಸಾನ್‌ ವಿಕಾಸ್‌ ಪತ್ರ ಶೇ 7.5, ಎನ್‌ಎಸ್‌ಸಿ ಶೇ 7.7 ಹಾಗೂ ಮಾಸಿಕ ಉಳಿತಾಯ ಯೋಜನೆಗೆ ಶೇ7.4 ಬಡ್ಡಿ‌ದರ ನಿಗದಿಪಡಿಸಲಾಗಿದೆ. 

ADVERTISEMENT

2023–24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲೂ ಇದೇ ಬಡ್ಡಿ ದರವನ್ನು ನಿಗದಿ‍ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.