ADVERTISEMENT

ಷೇರುಗಳು ಮಾರಾಟದ ಒತ್ತಡ; ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಪಿಟಿಐ
Published 17 ಅಕ್ಟೋಬರ್ 2024, 16:02 IST
Last Updated 17 ಅಕ್ಟೋಬರ್ 2024, 16:02 IST
ಷೇರು ಪೇಟೆ
ಷೇರು ಪೇಟೆ   

ನವದೆಹಲಿ: ಬ್ಯಾಂಕಿಂಗ್‌, ಆಟೊ ಮತ್ತು ರಿಯಾಲ್ಟಿ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಸತತ ಮೂರನೇ ದಿನವಾದ ಗುರುವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.

ವಿದೇಶಿ ಬಂಡವಾಳದ ಹೊರಹರಿವು ಕೂಡ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು. ಹೂಡಿಕೆದಾರರ ಸಂಪತ್ತು ₹6 ಲಕ್ಷ ಕೋಟಿ ಕರಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 494 ಅಂಶ ಇಳಿಕೆಯಾಗಿ, 81,006ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 221 ಅಂಶ ಕಡಿಮೆಯಾಗಿ 24,749ಕ್ಕೆ ಕೊನೆಗೊಂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.