ADVERTISEMENT

ಐಒಸಿ ಸ್ವಾಧೀನಕ್ಕೆ ಮೆರ್ಕೇಟರ್‌ ಪೆಟ್ರೋಲಿಯಂ

ಪಿಟಿಐ
Published 5 ನವೆಂಬರ್ 2023, 14:32 IST
Last Updated 5 ನವೆಂಬರ್ 2023, 14:32 IST
ಸಾಂಕೇತಿಕ
ಸಾಂಕೇತಿಕ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮವು (ಐಒಸಿ) ಮರ್ಕೇಟರ್‌ ಪೆಟ್ರೋಲಿಯಂ ಅನ್ನು ₹148 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ. 

ಮರ್ಕೇಟರ್ ಪೆಟ್ರೋಲಿಯಂ ಲಿಮಿಟೆಡ್‌ನ (ಎಂಪಿಎಲ್) ಶೇ 100ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಐಒಸಿ ಸಲ್ಲಿಸಿದ ಪ್ರಸ್ತಾವಕ್ಕೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ ಮುಂಬೈ ಪೀಠ 2023ರ ನವೆಂಬರ್ 2ರಂದು //ದಿವಾಳಿತನ ಮತ್ತು ದಿವಾಳಿತನ// ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅನುಮೋದಿಸಿದೆ.

ನಿರ್ಣಯದ ಪ್ರಕಾರ, ತೈಲ ನಿಗಮವು ಭದ್ರತೆ ಹೊಂದಿರುವ ಸಾಲಗಾರರಿಗೆ ₹135 ಕೋಟಿ ಪಾವತಿಸುತ್ತದೆ. ಭದ್ರತೆ ಹೊಂದಿಲ್ಲದ ಸಾಲಗಾರರಿಗೆ ಯಾವುದೇ ಪಾವತಿಯನ್ನು ಒದಗಿಸಲಾಗಿಲ್ಲ. ಕಾರ್ಯನಿರ್ವಹಣಾ ವೆಚ್ಚಕ್ಕೆ ಸಾಲ ನೀಡಿದ ಸಾಲಗಾರರಿಗೆ, ಮಾರಾಟಗಾರರು, ಕೆಲಸಗಾರರು, ಉದ್ಯೋಗಿಗಳು ಮತ್ತು ಶಾಸನಬದ್ಧ ಬಾಕಿಗಳಿಗೆ ಒಟ್ಟು ₹73 ಕೋಟಿಗಳ ಬದಲು ₹5.40 ಕೋಟಿ ನೀಡಲಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.