ADVERTISEMENT

ಐಆರ್‌ಸಿಟಿಸಿ ಲಾಭ ಶೇ 30ರಷ್ಟು ಹೆಚ್ಚಳ

ಪಿಟಿಐ
Published 8 ನವೆಂಬರ್ 2023, 11:21 IST
Last Updated 8 ನವೆಂಬರ್ 2023, 11:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 30.36ರಷ್ಟು ಹೆಚ್ಚಾಗಿ ₹294.67 ಕೋಟಿಗೆ ಏರಿಕೆ ಕಂಡಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹226 ಕೋಟಿಯಷ್ಟು ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ಶೇ 23.51ರಷ್ಟು ಹೆಚ್ಚಾಗಿ ₹995 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ವರಮಾನ ₹805.8 ಕೋಟಿಯಷ್ಟು ಇತ್ತು ಎಂದು ತಿಳಿಸಿದೆ. ಪ್ರತಿ ಷೇರಿಗೆ ₹2.50ರಂತೆ ಮಧ್ಯಂತರ ಲಾಭಾಂಶವನ್ನು ಆಡಳಿತ ಮಂಡಳಿ ಘೋಷಣೆ ಮಾಡಿರುವುದಾಗಿ ಕಂಪನಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.