ನವದೆಹಲಿ: ಕೊರೊನಾ ವೈರಸ್ ಸೋಂಕಿನ ಮೇಲೆ 3 ತಿಂಗಳುಗಳಿಂದ 11 ತಿಂಗಳುಗಳ ವರೆಗಿನ ಅವಧಿಯ ವಿಮೆ ಸೌಲಭ್ಯ ಒದಗಿಸಲು ಆರೋಗ್ಯ ವಿಮೆ ಮತ್ತು ಇತರ ವಿಮಾ ಕಂಪೆನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಅನುಮತಿ ನೀಡಿದೆ.
ಅಲ್ಪಾವಧಿ ವಿಮಾ ಸೌಲಭ್ಯದ ಅವಧಿ 3 ತಿಂಗಳಿನಿಂದ 11 ತಿಂಗಳುಗಳವರೆಗೆ ಇರಬಹುದಾಗಿದೆ. 3 ತಿಂಗಳಿನಿಂದ ಕಡಿಮೆ ಅವಧಿಗೆ ವಿಮೆ ಒದಗಿಸುವ ಅಂತಿಲ್ಲ ಎಂದು ಐಆರ್‌ಡಿಎಐ ಹೇಳಿದೆ.
ಈ ಅಲ್ಪಾವಧಿಯ ವಿಮಾ ಸೌಲಭ್ಯದಲ್ಲಿ ಕಾಯುವಿಕೆಯ ಅವಧಿ 15 ದಿನಗಳನ್ನು ಮೀರಬಾರದು. ಕೊರೊನಾ ವೈರಸ್ ಸೋಂಕನ್ನು ಗಮನದಲ್ಲಿಟ್ಟುಕೊಂಡೇ ಅಲ್ಪಾವಧಿಯ ಆರೋಗ್ಯ ವಿಮೆ ನೀಡಲು ಅನುಮತಿ ನೀಡಲಾಗಿದೆ ಎಂದು ಐಆರ್‌ಡಿಎಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.