ADVERTISEMENT

ಮೊಲಾಸಿಸ್‌–ಬಿ, ಸಿ ಬಳಸಿದ ಎಥೆನಾಲ್‌ ದರ ಹೆಚ್ಚಿಸಿ: ಐಎಸ್‌ಎಂಎ ಬೇಡಿಕೆ

ಪಿಟಿಐ
Published 9 ಡಿಸೆಂಬರ್ 2023, 15:45 IST
Last Updated 9 ಡಿಸೆಂಬರ್ 2023, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮೊಲಾಸಿಸ್‌–ಬಿ (ಕಾಕಂಬಿ) ಮತ್ತು ಮೊಲಾಸಿಸ್‌–ಸಿ ಬಳಸಿ ಉತ್ಪಾದಿಸಿದ ಎಥೆನಾಲ್‌ ಬೆಲೆಯನ್ನು ಹೆಚ್ಚಿಸುವಂತೆ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘವು (ಐಎಸ್‌ಎಂಎ) ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. 

ಎಥೆನಾಲ್ ಉತ್ಪಾದನೆಗೆ ಕಬ್ಬಿನ ಹಾಲು ಮತ್ತು ಸಕ್ಕರೆ ಪಾಕ ಬಳಸದಂತೆ ನಿಷೇಧ ಹೇರಲಾಗಿದೆ. ಇದರಿಂದಾಗಿ ಆಗುವ ನಷ್ಟವನ್ನು ಭರಿಸಲು ಆಗುವಂತೆ ಈ ಬೇಡಿಕೆ ಇಟ್ಟಿರುವುದಾಗಿ ಹೇಳಿವೆ.

ಕೇಂದ್ರ ಸರ್ಕಾರವು 2023–24ನೇ ಪೂರೈಕೆ ವರ್ಷಕ್ಕೆ (ನವೆಂಬರ್‌–ಅಕ್ಟೋಬರ್‌) ಎಥೆನಾಲ್‌ ತಯಾರಿಸಲು ಸಕ್ಕರೆ ಪಾಕ ಮತ್ತು ಕಬ್ಬಿನ ಹಾಲು ಬಳುಸುವುದನ್ನು ನಿಷೇಧಿ ಸರ್ಕಾರ ಡಿ.7ರಂದು ಆದೇಶ ಹೊರಡಿಸಿದೆ. ದೇಶದಲ್ಲಿ ಸಕ್ಕರೆ ಲಭ್ಯತೆ ಸುಧಾರಿಸುವುದು ಮತ್ತು ಬೆಲೆ ಏರಿಕೆ ನಿಯಂತ್ರಿಸುವುದು ಇದರ ಉದ್ದೇಶವಾಗಿದೆ.

ADVERTISEMENT

ಈ ನಿರ್ಧಾರದಿಂದ ಸಕ್ಕರೆ ಕಾರ್ಖಾನೆಗಳ ಕಬ್ಬು ಅರೆಯುವ ಸಾಮರ್ಥ್ಯವು ಗಣನೀಯವಾಗಿ ತಗ್ಗಲಿದೆ. ಕಾರ್ಖಾನೆಗಳಿಗಷ್ಟೇ ಅಲ್ಲದೆ ರೈತರಿಗೂ ನಷ್ಟ ಆಗಲಿದೆ. ರೈತರಿಗೆ ಕಬ್ಬು ಬಾಕಿ ಪಾವತಿಯೂ ವಿಳಂಬ ಆಗಲಿದೆೆ. ಹೀಗಾಗಿ ಸರ್ಕಾರವು ದರ ಹೆಚ್ಚಳವನ್ನು ಪರಿಗಣಿಸಬೇಕು. ಕಬ್ಬು ಬೆಳೆಗಾರರ ಹಣಕಾಸಿನ ಅಗತ್ಯಗಳನ್ನು ಈಡೇರಿಸಲು ಸಕ್ಕರೆ ಕಾರ್ಖಾನೆಗಳಿಗೆ ಬೇಕಿರುವಷ್ಟು ಹಣ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಒಕ್ಕೂಟವು  ಪ್ರಕಟಣೆಯಲ್ಲಿ ತಿಳಿಸಿದೆ.

ಮೊಲಾಸಿಸ್‌–ಸಿ ಬಳಸಿ ಉತ್ಪಾದಿಸುವ ಎಥೆನಾಲ್‌ ಬೆಲೆಯನ್ನು ಲೀಟರಿಗೆ ₹49.41 ಮತ್ತು ಮೊಲಾಸಿಸ್–ಬಿ ಬಳಸಿ ಉತ್ಪಾದಿಸುವ ಎಥೆನಾಲ್‌ ಬೆಲೆ ಲೀಟರಿಗೆ ₹60.73ರಷ್ಟನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.