ADVERTISEMENT

ಐ.ಟಿ ಕಂಪನಿಗಳಿಂದ ಹೊಸ ನೇಮಕಾತಿ ರದ್ದು: ಮೋಹನ್‌ ದಾಸ್‌ ಪೈ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 20:36 IST
Last Updated 28 ಏಪ್ರಿಲ್ 2020, 20:36 IST
ಮೋಹನ್‌ ದಾಸ್‌ ಪೈ
ಮೋಹನ್‌ ದಾಸ್‌ ಪೈ   

ಬೆಂಗಳೂರು: ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಈ ವರ್ಷ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದ ಸೇವಾ ಕಂಪನಿಗಳು ಹೊಸ ನೇಮಕಾತಿಯನ್ನು ರದ್ದುಗೊಳಿಸಲಿವೆ. ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಿಬ್ಬಂದಿ ವೇತನದಲ್ಲಿ ಶೇ 20–25ರಷ್ಟು ಕಡಿತ ಮಾಡಲಿವೆ’ ಎಂದು ಉದ್ಯಮಿ ಮೋಹನ್‌ ದಾಸ್‌ ಪೈ ತಿಳಿಸಿದ್ದಾರೆ.

’ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದವನ್ನೇ ಕಂಪನಿಗಳು ಮುಂದು ವರಿಸಲಿವೆ. ಯಾವುದೇ ರೀತಿಯ ಹೊಸ ನೇಮಕಾತಿಗೆ ಮುಂದಾಗುವುದಿಲ್ಲ. ಮುಂದಿನ ವರ್ಷ ನೇಮಕಾತಿ ಸಾಧ್ಯವಾಗಬಹುದು’ ಎಂದಿದ್ದಾರೆ.

ಇನ್ಫೊಸಿಸ್‌ನ ಮಾಜಿ ಸಿಎಫ್‌ಒ ಆಗಿರುವ ಅವರು, ‘ಐ.ಟಿ ಉದ್ಯಮವು ನಂಬಲರ್ಹವಾದ ಉದ್ಯೋಗ ಸ್ಥಿತ್ಯಂತರಕ್ಕೆ ಒಳಗಾ ಗಿದೆ. ಶೇ 90ಕ್ಕೂ ಅಧಿಕ ಸಿಬ್ಬಂದಿ ಮನೆ ಯಿಂದಲೇ ಕೆಲಸ ನಿರ್ವಹಿಸುತ್ತಿ ದ್ದಾರೆ. ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ, ಗ್ರಾಹಕರಿಂದ ಅನುಮತಿ ಪಡೆದುಕೊಂಡು, ಸುರಕ್ಷತೆಯನ್ನೂ ಗಮನದಲ್ಲಿ ಇಟ್ಟುಕೊಂಡು ಈ ಸಾಧನೆ ಮಾಡಲಾಗಿದೆ. ಲಾಕ್‌ಡೌನ್‌ ಹಿಂದಕ್ಕೆ ಪಡೆದ ಬಳಿಕವೂ ಶೇ 25–30ರಷ್ಟು ಸಿಬ್ಬಂದಿ ಪಾಳಿಯ ಆಧಾರದ ಮೇಲೆ ಮನೆಯಿಂದಲೇ ಕೆಲಸ ಮಾಡಬೇಕಾಗಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.