ADVERTISEMENT

ಐಟಿಸಿ ತೆಕ್ಕೆಗೆ ಸನ್‌ರೈಸ್‌ ಫುಡ್ಸ್‌: ₹2,150 ಕೋಟಿಗೆ ಖರೀದಿ

ಪಿಟಿಐ
Published 28 ಜುಲೈ 2020, 13:56 IST
Last Updated 28 ಜುಲೈ 2020, 13:56 IST
ಐಟಿಸಿ
ಐಟಿಸಿ   

ನವದೆಹಲಿ: ಮಸಾಲೆ ಪದಾರ್ಥಗಳನ್ನು ತಯಾರಿಸುವ ಸನ್‌ರೈಸ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಎಫ್‌ಪಿಎಲ್‌) ಕಂಪನಿಯನ್ನು ₹ 2,150 ಕೋಟಿಗೆ ಖರೀದಿ ಮಾಡಿರುವುದಾಗಿ ಐಟಿಸಿ ಲಿಮಿಟೆಡ್‌ ತಿಳಿಸಿದೆ.

ಈ ಸ್ವಾಧೀನದಿಂದ ಸನ್‌ರೈಸ್‌ನ ಅಂಗಸಂಸ್ಥೆಗಳಾಗಿದ್ದ ಸನ್‌ರೈಸ್‌ ಶೀತಘರ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಹಾಬಿಟ್ಸ್‌ ಇಂಟರ್‌ನ್ಯಾಷನಲ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳು ಐಟಿಸಿಯ ತೆಕ್ಕೆಗೆ ಬಂದಿವೆ. 2019–20ರಲ್ಲಿ ಸನ್‌ರೈಸ್‌ ₹ 591.50 ಕೋಟಿ ಮೊತ್ತದ ವಹಿವಾಟು ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT