ADVERTISEMENT

ಐಟಿಸಿ ಲಾಭ ಶೇ 6ರಷ್ಟು ಹೆಚ್ಚಳ

ಪಿಟಿಐ
Published 19 ಅಕ್ಟೋಬರ್ 2023, 20:04 IST
Last Updated 19 ಅಕ್ಟೋಬರ್ 2023, 20:04 IST

ನವದೆಹಲಿ: ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 6.11ರಷ್ಟು ಹೆಚ್ಚಾಗಿ ₹4,955 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ₹4,570 ಕೋಟಿ ಆಗಿತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯ ಸರಾಸರಿ ವರಮಾನವು ₹18,430 ಕೋಟಿಯಿಂದ ₹19,137 ಕೋಟಿಗೆ ಏರಿಕೆ ಕಂಡಿದೆ. ಕಂಪನಿಯ ವೆಚ್ಚವು ಶೇ 3.54ರಷ್ಟು ಹೆಚ್ಚಾಗಿ ₹13,278 ಕೋಟಿಗೆ ಏರಿಕೆ ಕಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.