ನವದೆಹಲಿ: ಈ ಬಾರಿಯ ಧನ್‌ತೇರಸ್‌ನಲ್ಲಿ (ಶುಕ್ರವಾರ) ಚಿನ್ನಕ್ಕೆ ಉತ್ತಮ ಬೇಡಿಕೆ ಬರಲಿದ್ದು, ಮಾರಾಟವು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹರಳು ಮತ್ತು ಚಿನ್ನಾಭರಣ ಸಮಿತಿ ಅಧ್ಯಕ್ಷ ಸಯ್ಯಮ್ ಮೆಹ್ತಾ ಹೇಳಿದ್ದಾರೆ.
ಚಿನ್ನಾಭರಣ ಸೇರಿದಂತೆ ಮೌಲ್ಯಯತವಾದ ವಸ್ತುಗಳ ಖರೀದಿಗೆ ಧನ್‌ತೇರಸ್ ಶುಭ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷದ ಧನ್‌ತೇರಸ್‌ಗೆ ಹೋಲಿಸಿದರೆ ಈ ಬಾರಿ ಚಿನ್ನದ ದರವು ಶೇ 22ರಷ್ಟು ಏರಿಕೆ ಕಂಡಿದ್ದು, ದೆಹಲಿಯಲ್ಲಿ 10 ಗ್ರಾಂಗೆ ₹61 ಸಾವಿರಕ್ಕೆ ತಲುಪಿದೆ. 2022ರಲ್ಲಿ 10 ಗ್ರಾಂಗೆ ₹50,139 ಮತ್ತು 2021ರಲ್ಲಿ ₹47,644ರಷ್ಟು ಇತ್ತು.
ಕೆಲವು ಚಿನ್ನಾಭರಣ ಕಂಪನಿಗಳು ಮೇಕಿಂಗ್ ಶುಲ್ಕದಲ್ಲಿ ರಿಯಾಯಿತಿ ನೀಡಿವೆ. ಹೀಗಾಗಿ ಜನರು ಧನ್‌ತೇರಸ್ ದಿನ ಚಿನ್ನಾಭರಣ ಮನೆಗೆ ಬರುವಂತೆ ಮುಂಚಿತವಾಗಿಯೇ ಬುಕ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಚಿನ್ನಾಭರಣ ಮಾರಾಟವು ಶೇ 25ರಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಜೋಯಾಲುಕ್ಕಾಸ್ ಹೊಂದಿದೆ. ಈ ಬಾರಿ 650 ಕೆ.ಜಿಯಷ್ಟು ಚಿನ್ನಾಭರಣ ಮಾರಾಟ ಆಗುವ ಅಂದಾಜು ಮಾಡಲಾಗಿದೆ. ಬೆಲೆ ತುಸು ಇಳಿಕೆ ಕಂಡರೆ ಮಾರಾಟ ಇನ್ನಷ್ಟು ಹೆಚ್ಚಾಗಲಿದೆ ಎಂದು ಜೋಯಾಲುಕ್ಕಾಸ್ ಅಧ್ಯಕ್ಷ ಜೋಯ್ ಅಲುಕ್ಕಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.