ಬೆಂಗಳೂರು: ಜಿಯೊ ಏರ್‌ಫೈಬರ್ ಈಗ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ದೊರೆಯಲಿದೆ ಎಂದು ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ ತಿಳಿಸಿದೆ.
ಈ ನಗರಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳಲ್ಲೂ ಜಿಯೊ ಏರ್‌ಫೈಬರ್ ಸೌಲಭ್ಯ ದೊರೆಯಲಿದೆ. ಜಿಯೊದ ಆಪ್ಟಿಕಲ್ ಫೈಬರ್ ಮೂಲ ಸೌಕರ್ಯವು ದೇಶದಾದ್ಯಂತ ಹದಿನೈದು ಲಕ್ಷ ಕಿಲೊಮೀಟರ್‌ನಷ್ಟು ವ್ಯಾಪಿಸಿದೆ ಎಂದು ತಿಳಿಸಿದೆ.
ಜಿಯೊ ಏರ್ ಫೈಬರ್ ಅತ್ಯುತ್ತಮ ದರ್ಜೆಯ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ. ಇದರೊಟ್ಟಿಗೆ ಡಿಜಿಟಲ್ ಮನರಂಜನಾ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಗ್ರಾಹಕರು ಪ್ಲಾನ್‌ಗಳ ಚಂದಾದಾರಿಕೆ ಪಡೆದರೆ ಒಟಿಟಿ ಅಪ್ಲಿಕೇಷನ್‌ಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶವಿದೆ. ಟಿ.ವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಸಾಧನಗಳಲ್ಲೂ ಅಪ್ಲಿಕೇಷನ್‌ಗಳನ್ನು ಬಳಸಬಹುದು ಎಂದು ವಿವರಿಸಿದೆ.
ಜಿಯೊ ಏರ್‌ಫೈಬರ್ ಸಂಪರ್ಕದ ಹೆಚ್ಚಳದಿಂದ ಭಾರತೀಯರ ಮನರಂಜನಾ ಹವ್ಯಾಸದಲ್ಲಿ ಭಾರೀ ಬದಲಾವಣೆಯಾಗಲಿದೆ. ಒಟಿಟಿ ಅಪ್ಲಿಕೇಷನ್‌ಗಳು, ಜಿಯೊ ಸಿನಿಮಾ ಮತ್ತು ಜಿಯೊ ಟಿ.ವಿಯಂತಹ ಪ್ಲಾಟ್‌ಫಾರ್ಮ್‌ಗಳು ಇದಕ್ಕೆ ವೇದಿಕೆಯಾಗಲಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.