ADVERTISEMENT

ಜಿಯೊಫೋನ್‌ ನೆಕ್ಸ್ಟ್‌ಗೆ ‘ಪ್ರಗತಿ ಒಎಸ್‌’: ಜಿಯೊ, ಗೂಗಲ್‌ ಅಭಿವೃದ್ಧಿ

ಪಿಟಿಐ
Published 25 ಅಕ್ಟೋಬರ್ 2021, 13:55 IST
Last Updated 25 ಅಕ್ಟೋಬರ್ 2021, 13:55 IST

ನವದೆಹಲಿ: ಜಿಯೊ ಕಂಪನಿಯು ಸೋಮವಾರ ಬಿಡುಗಡೆ ಮಾಡಿರುವ ವಿಡಿಯೊದ ಪ್ರಕಾರ, ಜಿಯೊ ಪ್ಲಾಟ್‌ಫಾರಂ ಮತ್ತು ಗೂಗಲ್‌ ಕಂಪನಿ ಜೊತೆಗೂಡಿಜಿಯೊಫೋನ್‌ ನೆಕ್ಸ್ಟ್‌ಗೆ ‘ಪ್ರಗತಿ ಒಎಸ್‌’ ಅಭಿವೃದ್ಧಿಪಡಿಸಿವೆ.ದೀಪಾವಳಿಗೆ ವೇಳೆಗೆ ಈ ಫೋನ್‌ ಬಿಡುಗಡೆ ಆಗುವ ನಿರೀಕ್ಷೆ ಮಾಡಲಾಗಿದೆ.

‘ಪ್ರಗತಿ ಓಎಸ್’ ಆಂಡ್ರಾಯ್ಡ್‌ನಿಂದ ಚಾಲಿತವಾಗಿದೆ. ಜಿಯೋ ಮತ್ತು ಗೂಗಲ್‌ನಲ್ಲಿ ಇರುವ ಉತ್ತಮ ಮನಸ್ಸುಗಳನ್ನು ಒಟ್ಟುಗೂಡಿಸುವ ಉತ್ಸಾಹಭರಿತ ಪ್ರಯತ್ನದ ಫಲಿತಾಂಶ ಇದಾಗಿದೆ ಎಂದು ಆಂಡ್ರಾಯ್ಡ್‌ನ ಪ್ರಧಾನ ವ್ಯವಸ್ಥಾಪಕ ರಾಮ್‌ ಪಾಪಟ್ಲಾ ಹೇಳಿದ್ದಾರೆ.

10 ಭಾರತೀಯ ಭಾಷೆಗಳಿಗೆ ಅನುವಾದ ಮಾಡಬಲ್ಲ ವೈಶಿಷ್ಟ್ಯವನ್ನುಜಿಯೊಫೋನ್‌ ನೆಕ್ಸ್ಟ್‌ ಹೊಂದಿರಲಿದೆ.ರಿಲಯನ್ಸ್‌ ಸಮೂಹದ ನಿಯೋಲಿಂಕ್‌ ಕಂಪನಿಯು ತಿರುಪತಿ ಮತ್ತು ಶ್ರೀಪೆರಂಬದೂರಿನಲ್ಲಿ ತಯಾರಿಸಲಿರುವ ಕ್ವಾಲ್ಕಂ ಪ್ರೊಸೆಸರ್‌ ಅನ್ನು ಈ ಫೋನ್‌ ಹೊಂದರಲಿದೆ ಎಂದು ಕಂಪನಿಯು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.