ನವದೆಹಲಿ: ಟೈಮ್ ನಿಯತಕಾಲಿಕೆ ಸಿದ್ಧಪಡಿಸಿರುವ 100 ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ಜಿಯೊ ಪ್ಲಾಟ್‌ಫಾರ್ಮ್ಸ್ ಮತ್ತು ಇ–ಕಲಿಕೆ ಕ್ಷೇತ್ರದ ನವೋದ್ಯಮ ಕಂಪನಿ ‘ಬೈಜುಸ್’ ಸ್ಥಾನ ಪಡೆದಿವೆ.
ಭವಿಷ್ಯವನ್ನು ರೂಪಿಸುತ್ತಿರುವ ಕಂಪನಿಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ ಎಂದು ಟೈಮ್ ನಿಯತಕಾಲಿಕೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಪಟ್ಟಿಯನ್ನು ಸಿದ್ಧಪಡಿಸಲು ‘ಟೈಮ್’, ಆರೋಗ್ಯ ಸೇವೆ, ಮನರಂಜನೆ, ಸಾರಿಗೆ, ತಂತ್ರಜ್ಞಾನ ವಲಯಗಳಿಂದ ನಾಮನಿರ್ದೇಶನ ಆಹ್ವಾನಿಸಿತ್ತು. ಕಂಪನಿಗಳು ಎಷ್ಟರಮಟ್ಟಿಗೆ ಪ್ರಸ್ತುತವಾಗಿವೆ, ಅವುಗಳು ಬೀರಿರುವ ಪರಿಣಾಮ ಏನು, ಹೊಸದಾಗಿ ಏನನ್ನು ತಂದಿವೆ, ಅವುಗಳಲ್ಲಿನ ನಾಯಕತ್ವದ ಸ್ಥಾನಗಳಲ್ಲಿ ಯಾರಿದ್ದಾರೆ, ಕಂಪನಿಗಳು ಪಡೆದಿರುವ ಯಶಸ್ಸು ಹೇಗಿದೆ ಎಂಬ ಅಂಶಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಿದೆ.
ಹೊಸದನ್ನು ಹುಡುಕಿದ ಕಂಪನಿಗಳ ಸಾಲಿನಲ್ಲಿ ‘ಜಿಯೊ’ ಸ್ಥಾನ ಪಡೆದಿದೆ. ಝೂಮ್, ಟಿಕ್‌ಟಾಕ್, ಐಕಿಯಾ, ಮಾಡರ್ನಾ, ನೆಟ್‌ಫ್ಲಿಕ್ಸ್ ಕಂಪನಿಗಳು ಕೂಡ ಈ ವಿಭಾಗದಲ್ಲಿವೆ. ಟೆಸ್ಲಾ, ಹುಆವೆ, ಶಾಪಿಫೈ, ಏರ್‌ಬಿಎನ್‌ಬಿ ಕಂಪನಿಗಳ ಸಾಲಿನಲ್ಲಿ ಬೈಜುಸ್ ಸ್ಥಾನ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.