ADVERTISEMENT

ವಾಟ್ಸ್ಆ್ಯಪ್‌ ಮೂಲಕ ದಿನಸಿ, ತರಕಾರಿ ಖರೀದಿ ಆರಂಭ!

ಪಿಟಿಐ
Published 15 ಡಿಸೆಂಬರ್ 2021, 12:24 IST
Last Updated 15 ಡಿಸೆಂಬರ್ 2021, 12:24 IST
   

ನವದೆಹಲಿ: ಜಿಯೊಮಾರ್ಟ್‌ ಗ್ರಾಹಕರು ದಿನಸಿ, ತರಕಾರಿ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ವಾಟ್ಸ್‌ಆ್ಯಪ್‌ ಮೂಲಕವೂ ಆರ್ಡರ್‌ ಮಾಡಬಹುದಾಗಿದೆ.

ವಾಟ್ಸ್‌ಆ್ಯಪ್‌ನಲ್ಲಿ ಟ್ಯಾಪ್‌ ಆ್ಯಂಡ್‌ ಚಾಟ್‌ ಆಯ್ಕೆ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್‌ ಮಾಡಬಹುದು. ಈ ಸೇವೆಯು ಉಚಿತವಾಗಿರಲಿದ್ದು, ಕನಿಷ್ಠ ಇಂತಿಷ್ಟು ಮೌಲ್ಯದ ಖರೀದಿ ನಡೆಸಬೇಕು ಎನ್ನುವ ಮಿತಿ ಇಲ್ಲ ಎಂದು ಕಂಪನಿಯು ತಿಳಿಸಿದೆ.

ವಾಟ್ಸ್‌ಆ್ಯಪ್‌ನ 40 ಕೋಟಿ ಬಳಕೆದಾರರು ಮತ್ತು ರಿಲಯನ್ಸ್‌ನ ರಿಟೇಲ್‌ ಗ್ರಾಹಕರನ್ನು ಸುಲಭವಾಗಿ ತಲುಪಲು ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ಜಿಯೊಮಾರ್ಟ್‌ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.