ADVERTISEMENT

ಜೆಎಲ್‌ಆರ್‌ ಬೆಲೆ ಏರಿಕೆ

ಪಿಟಿಐ
Published 19 ಮಾರ್ಚ್ 2019, 17:43 IST
Last Updated 19 ಮಾರ್ಚ್ 2019, 17:43 IST

ನವದೆಹಲಿ: ತಯಾರಿಕಾ ವೆಚ್ಚದಲ್ಲಿನ ಹೆಚ್ಚಳ ಸರಿದೂಗಿಸಿಕೊಳ್ಳಲು ಜಾಗ್ವಾರ್‌ ಲ್ಯಾಂಡ್‌ ರೋವರ್ ಇಂಡಿಯಾ ಕಂಪನಿಯು ಏಪ್ರಿಲ್‌ 1ರಿಂದ ಅನ್ವಯಿಸುವಂತೆ ತನ್ನ ಆಯ್ದ ವಾಹನಗಳ ಬೆಲೆಯನ್ನು ಶೇ 4ರವರೆಗೂ ಹೆಚ್ಚಳ ಮಾಡಿದೆ.

ನಿರ್ದಿಷ್ಟವಾಗಿ ಯಾವ ಮಾದರಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಕಂಪನಿ ತಿಳಿಸಿಲ್ಲ.

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ (ಟಿಕೆಎಂ) ಕಂಪನಿ ಸಹ ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದೆ. ಆದರೆ, ಯಾವ ಪ್ರಮಾಣದಲ್ಲಿ, ಯಾವೆಲ್ಲಾ ಮಾದರಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎನ್ನುವುದನ್ನು ತಿಳಿಸಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.