ADVERTISEMENT

ಐ.ಟಿ ಉದ್ಯೋಗ ನೇಮಕಾತಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 15:56 IST
Last Updated 3 ಅಕ್ಟೋಬರ್ 2024, 15:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸೆಪ್ಟೆಂಬರ್‌ನಲ್ಲಿ ಕಚೇರಿ ಅಥವಾ ಆಡಳಿತ ವಿಭಾಗದಲ್ಲಿನ ಉದ್ಯೋಗದ (ವೈಟ್‌ ಕಾಲರ್‌) ನೇಮಕಾತಿಯಲ್ಲಿ ಶೇ 6ರಷ್ಟು ಏರಿಕೆಯಾಗಿದೆ. ಐ.ಟಿ ವಲಯದಲ್ಲಿನ ನೇಮಕಾತಿಯು ಚೇತರಿಕೆ ಕಂಡಿದೆ ಎಂದು ನೌಕರಿ ಡಾಟ್‌ ಕಾಂ ವರದಿ ಗುರುವಾರ ತಿಳಿಸಿದೆ.

ಐ.ಟಿ ವಲಯದಲ್ಲಿ ನೇಮಕಾತಿ ಪ್ರಮಾಣವು ಶೇ 18ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಯೂನಿಕಾರ್ನ್‌ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೇಮಕಾತಿಯು ಕ್ರಮವಾಗಿ ಶೇ 16 ಮತ್ತು ಶೇ 14ರಷ್ಟು ಏರಿಕೆಯಾಗಿದೆ. ಎಫ್‌ಎಂಸಿಜಿ ಶೇ 23 ಮತ್ತು ತೈಲ ಮತ್ತು ಅನಿಲ ವಲಯದಲ್ಲಿ ಶೇ 13ರಷ್ಟು ಬೆಳವಣಿಗೆಯಾಗಿದೆ ಎಂದು ವಿವರಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.