ADVERTISEMENT

ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ‘ಜಾಯ್‌ವಾಲಿ ದೀಪಾವಳಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:22 IST
Last Updated 22 ಅಕ್ಟೋಬರ್ 2024, 14:22 IST
ಜೋಯಾಲುಕ್ಕಾಸ್‌
ಜೋಯಾಲುಕ್ಕಾಸ್‌   

ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ಜೋಯಾಲುಕ್ಕಾಸ್‌ ‘ಜಾಯ್‌ವಾಲಿ ದೀಪಾವಳಿ’ ಕೊಡುಗೆಯನ್ನು ಪ್ರಕಟಿಸಿದೆ.

ನವೆಂಬರ್‌ 3ರ ವರೆಗೆ ಈ ಕೊಡುಗೆ ಇರಲಿದೆ. ಈ ವೇಳೆ ಗ್ರಾಹಕರು ₹1 ಲಕ್ಷ ಮೌಲ್ಯದ ವಜ್ರ ಮತ್ತು ಕತ್ತರಿಸದ ವಜ್ರಾಭರಣಗಳ ಖರೀದಿಯೊಂದಿಗೆ 1 ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಬಹುದು ಎಂದು ಜೋಯಾಲುಕ್ಕಾಸ್‌ ತಿಳಿಸಿದೆ.

₹50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಅಮೂಲ್ಯ ಆಭರಣಗಳ ಖರೀದಿ ಮೇಲೆ ₹1 ಸಾವಿರ ಮೌಲ್ಯದ ಗಿಫ್ಟ್‌ ವೋಚರ್‌, ₹10 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಬೆಳ್ಳಿ ಆಭರಣಗಳ ಮೇಲೆ ₹500 ಮೌಲ್ಯದ ಗಿಫ್ಟ್‌ ವೋಚರ್‌ ಪಡೆಯಬಹುದು ಎಂದು ತಿಳಿಸಿದೆ.

ADVERTISEMENT

ಶೇ 10ರಷ್ಟು ಹಣ ಪಾವತಿಯೊಂದಿಗೆ ಪ್ರಸಕ್ತ ದರದಲ್ಲಿಯೇ ಮುಂಗಡ ಖರೀದಿ ನಿಗದಿ ಮಾಡಬಹುದಾಗಿದೆ. ಹಳೆಯ ಚಿನ್ನವನ್ನು ಶೇ 100ರಷ್ಟು ಎಚ್‌ಯುಐಡಿ 916 ಹಾಲ್‌ಮಾರ್ಕ್‌  ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಹಾಲ್‌ಮಾರ್ಕ್‌ ಆಭರಣಗಳ ಮೇಲೆ ಒಂದು ವರ್ಷದ ಉಚಿತ ವಿಮೆ, ಜೀವಿತಾವಧಿವರೆಗೆ ಉಚಿತ ನಿರ್ವಹಣೆ ಮತ್ತು ಮರು ಖರೀದಿಯ ಖಾತರಿ ನೀಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.