ಬೆಂಗಳೂರು: ಟೆಲಿ ಮಾರ್ಕೆಟಿಂಗ್ ಹೆಸರಿನಡಿ ಗ್ರಾಹಕರಿಗೆ ಕರೆ ಮಾಡಿ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸುವಂತೆ ಹಾಗೂ ಹಣ ಪಾವತಿ ಮಾಡುವಂತೆ ಕಂಪನಿಯಿಂದ ಗ್ರಾಹಕರಿಗೆ ದೂರವಾಣಿ ಕರೆ ಮಾಡುತ್ತಿಲ್ಲ ಎಂದು ಜೋಯಾಲುಕ್ಕಾಸ್ ಸ್ಪಷ್ಟನೆ ನೀಡಿದೆ.
ಜೋಯಾಲುಕ್ಕಾಸ್‌ನ ಸಿಬ್ಬಂದಿ ಎಂದು ಹೇಳಿಕೊಂಡು ವಂಚಕರು, ರಿಯಾಯಿತಿ ದರದಲ್ಲಿ ಚಿನ್ನ ನೀಡಲಾಗುತ್ತಿದೆ ಎಂದು ಕರೆ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಕೋರಿದೆ.
ಮಳಿಗೆಗಳು ಮತ್ತು ಅಧಿಕೃತ ಆನ್‌ಲೈನ್ ವೇದಿಕೆಯಲ್ಲಿ ಮಾತ್ರ ನಮ್ಮ ಉತ್ಪನ್ನಗಳ ಮಾರಾಟ ಮತ್ತು ವಹಿವಾಟು ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ವಂಚನೆ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ. ಸಾರ್ವಜನಿಕರು ಇಂತಹ ದೂರವಾಣಿ ಕರೆ ಬಂದರೆ ಹತ್ತಿರದ ಜೋಯಾಲುಕ್ಕಾಸ್‌ನ ಮಳಿಗೆಗಳು ಅಥವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.