ADVERTISEMENT

ಚೆನ್ನೈ: ಕರೂರ್‌ ವೈಶ್ಯ ಬ್ಯಾಂಕ್‌ನ 850ನೇ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:12 IST
Last Updated 13 ನವೆಂಬರ್ 2024, 16:12 IST
ಚೆನ್ನೈನಲ್ಲಿ ಇತ್ತೀಚೆಗೆ ಕರೂರ್ ವೈಶ್ಯ ಬ್ಯಾಂಕ್‌ನ 850ನೇ ಶಾಖೆಯನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬಿ. ರಮೇಶ್ ಕುಮಾರ್ ಉದ್ಘಾಟಿಸಿದರು
ಚೆನ್ನೈನಲ್ಲಿ ಇತ್ತೀಚೆಗೆ ಕರೂರ್ ವೈಶ್ಯ ಬ್ಯಾಂಕ್‌ನ 850ನೇ ಶಾಖೆಯನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬಿ. ರಮೇಶ್ ಕುಮಾರ್ ಉದ್ಘಾಟಿಸಿದರು   

ಬೆಂಗಳೂರು: ಚೆನ್ನೈನಲ್ಲಿ ಇತ್ತೀಚೆಗೆ ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್‌ನ (ಕೆವಿಬಿ) 850ನೇ ಶಾಖೆಯು ಉದ್ಘಾಟನೆಗೊಂಡಿತು.

ಆಂಧ್ರಪ್ರದೇಶದ ನೆಲ್ಲೂರು, ವಿಜಯವಾಡ ಮತ್ತು ತಮಿಳುನಾಡಿನ ಮದುರೈ, ನಾಗರ್‌ಕೋಯಿಲ್‌, ಸೇಲಂನಲ್ಲಿಯೂ ಬ್ಯಾಂಕ್‌ ಇದೇ ವೇಳೆ ಹೊಸ ಶಾಖೆಗಳನ್ನು ತೆರೆದಿದೆ. ಪ್ರಸ್ತುತ ಶಾಖೆಗಳ ಸಂಖ್ಯೆ 854ಕ್ಕೆ ಏರಿದೆ. 

ಬ್ಯಾಂಕ್‌ ಪ್ರಸ್ತುತ 2,200ಕ್ಕೂ ಹೆಚ್ಚು ಎಟಿಎಂ ಮತ್ತು 9,085 ಸಿಬ್ಬಂದಿಯನ್ನು ಹೊಂದಿದೆ. ಕರ್ನಾಟಕದಲ್ಲಿ 53 ಶಾಖೆಗಳಿವೆ. 

ADVERTISEMENT

ಬ್ಯಾಂಕ್‌ನ ಒಟ್ಟು ವ್ಯವಹಾರವು 2024–25ನೇ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1.76 ಲಕ್ಷ ಕೋಟಿ ಆಗಿದೆ. ಬ್ಯಾಂಕ್‌ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಕೆವಿಬಿ ಡಿಲೈಟ್‌ 56.3 ಲಕ್ಷ ಡೌನ್‌ಲೋಡ್‌ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.