ADVERTISEMENT

ಕರೂರು ವೈಶ್ಯ ಬ್ಯಾಂಕ್‌ಗೆ ₹458 ಕೋಟಿ ಲಾಭ

ಪಿಟಿಐ
Published 24 ಜುಲೈ 2024, 16:13 IST
Last Updated 24 ಜುಲೈ 2024, 16:13 IST
ರಮೇಶ್‌ ಬಾಬು
ರಮೇಶ್‌ ಬಾಬು   

ಚೆನ್ನೈ: ಖಾಸಗಿ ವಲಯದ ತಮಿಳುನಾಡಿನ ಕರೂರು ವೈಶ್ಯ ಬ್ಯಾಂಕ್‌ 2024–25ನೇ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹458 ಕೋಟಿ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹358 ಕೋಟಿ ಲಾಭ ಗಳಿಸಿತ್ತು. ಈ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇ 27ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ತಿಳಿಸಿದೆ.

ಒಟ್ಟು ವರಮಾನವು ₹2,216 ಕೋಟಿಯಿಂದ ₹2,672 ಕೋಟಿಗೆ ಏರಿಕೆಯಾಗಿದೆ. 2024ರ ಮಾರ್ಚ್‌ಗೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹2,100 ಕೋಟಿ ನಿವ್ವಳ ಲಾಭ ಗಳಿಸಿತ್ತು. ₹9,862 ಕೋಟಿ ವರಮಾನ ದಾಖಲಿಸಿತ್ತು.

ADVERTISEMENT

‘ಪ್ರಸಕ್ತ ವರ್ಷದ ಜೂನ್‌ ಅಂತ್ಯಕ್ಕೆ ಬ್ಯಾಂಕ್‌ನ ವಹಿವಾಟು ₹1.70 ಲಕ್ಷ ಕೋಟಿ ದಾಟಿದ್ದು, ಶೇ 15ರಷ್ಟು ಬೆಳವಣಿಗೆ ಕಂಡಿದೆ. ಬ್ಯಾಂಕ್‌ 840 ಶಾಖೆಗಳು, 1 ಡಿಜಿಟಲ್‌ ಬ್ಯಾಂಕಿಂಗ್‌ ಘಟಕ ಮತ್ತು 2,253 ಎಟಿಎಂಗಳನ್ನು ಹೊಂದಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್‌ ಬಾಬು ಬಿ. ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.