ನವದೆಹಲಿ: ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಆರೋಗ್ಯಕರ ಬೆಳವಣಿಗೆಯಿಂದ ಪ್ರಮುಖ ಎಂಟು ಮೂಲ ಸೌಕರ್ಯ ವಲಯಗಳ ಬೆಳವಣಿಗೆ ಮೇ ತಿಂಗಳಲ್ಲಿ ಶೇ 6.3ರಷ್ಟು ದಾಖಲಾಗಿದೆ.
ಏಪ್ರಿಲ್‌ನಲ್ಲಿ ಈ ವಲಯಗಳ ಬೆಳವಣಿಗೆ ಶೇ 6.7ರಷ್ಟಿತ್ತು. 2023ರ ಮೇ ತಿಂಗಳಲ್ಲಿ ಇದು ಶೇ 5.2ರಷ್ಟು ಬೆಳವಣಿಗೆ ಆಗಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.
ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಎಂಟು ವಲಯಗಳಾಗಿವೆ.
ಈ ವಲಯಗಳು ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಶೇ 40.27ರಷ್ಟು ಪಾಲು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.