ADVERTISEMENT

ಕೆಎಫ್‌ಸಿ: ಎರಡನೇ ತ್ರೈಮಾಸಿಕದಲ್ಲಿ ₹34 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:10 IST
Last Updated 28 ಅಕ್ಟೋಬರ್ 2024, 18:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇಶದಲ್ಲಿ ಪಿಜ್ಜಾ ಹಟ್‌ ಹಾಗೂ ಕೆಎಫ್‌ಸಿ ರೆಸ್ಟೋರೆಂಟ್‌ಗಳನ್ನು ನಡೆಸುವ ಸಫೈರ್‌ ಫುಡ್ಸ್‌ ಇಂಡಿಯಾ ಲಿಮಿಟೆಡ್‌, ಸೆ. 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ₹34 ಕೋಟಿ ನಷ್ಟ ದಾಖಲಿಸಿದೆ.

ಕಳೆದ ವರ್ಷ ₹15.34 ಕೋಟಿ ಲಾಭ ಗಳಿಸಿದ್ದ ಕಂಪನಿಯು, ಪ್ರಸಕ್ತ ತ್ರೈಮಾಸಿಕದಲ್ಲಿ ₹95 ಲಕ್ಷ ಲಾಭ ಗಳಿಸುವ ಗುರಿಯನ್ನು ಹೊಂದಿತ್ತು.

ಜಾಗತಿಕ ಕಂಪನಿಗಳಾದ ಮೆಕ್‌ಡೊನಾಲ್ಡ್ಸ್‌, ಡೊಮಿನಾಸ್‌ಗೆ ಪೈಪೋಟಿ ಒಡ್ಡಲು ಕೆಎಫ್‌ಸಿ ಈ ಹಿಂದಿನ ತ್ರೈಮಾಸಿಕಗಳಲ್ಲಿ ರಿಯಾಯಿತಿ ದರದಲ್ಲಿ ತನ್ನ ಉತ್ಪನ್ನಗಳನ್ನು ಪೂರೈಸಿದೆ.

ADVERTISEMENT

ಕೆಎಫ್‌ಸಿ ರೆಸ್ಟೋರೆಂಟ್‌ಗಳಲ್ಲಿ ಶೇ 8ರಷ್ಟು ವಹಿವಾಟು ಕುಸಿತಗೊಂಡಿದ್ದರೆ, ಪಿಜ್ಜಾ ಹಟ್‌ಗಳಲ್ಲಿನ ವಹಿವಾಟು ಶೇ 3ರಷ್ಟು ಕುಸಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.