ನವದೆಹಲಿ: ‘ಕಾರೆನ್ಸ್’ ವಾಹನವು ಮೊದಲ ದಿನವೇ 7,738 ಬುಕಿಂಗ್ ಪಡೆದಿದೆ ಎಂದು ಕಿಯಾ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.
ಈ ವಾಹನದ ಪ್ರೀ–ಬುಕಿಂಗ್‌ಅನ್ನು ಕಂಪನಿಯು ಜನವರಿ 14ರಂದು ಆರಂಭಿಸಿತ್ತು. ₹ 25 ಸಾವಿರ ಪಾವತಿಸಿ ಬುಕ್ ಮಾಡಬಹುದು.
‘ಪ್ರೀ–ಬುಕಿಂಗ್ ಶುರು ಮಾಡಿದ ಮೊದಲ 24 ಗಂಟೆಗಳಲ್ಲಿ ಇಷ್ಟು ವಾಹನಗಳಿಗೆ ಬುಕಿಂಗ್ ಬಂದಿದೆ. ನಮ್ಮ ಯಾವುದೇ ಉತ್ಪನ್ನಕ್ಕೆ ಭಾರತದಲ್ಲಿ ಮೊದಲ ದಿನ ಬಂದಿರುವ ಅತಿಹೆಚ್ಚಿನ ಬುಕಿಂಗ್ ಇದು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತಾಯ್–ಜಿನ್ ಪಾರ್ಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.