ಬೆಂಗಳೂರು: ಸ್ಕೋಡಾ ಆಟೊ ಇಂಡಿಯಾ ಕಂಪನಿಯು ವಿಶೇಷ ಗ್ರಾಹಕ ಡ್ರೈವ್ ಮೂಲಕ ತನ್ನ ಕುಶಾಕ್ ವಾಹನದ ಯಶಸ್ಸಿನ ಸಂಭ್ರಮವನ್ನು ಬೆಂಗಳೂರಿನಲ್ಲಿ ಆಚರಿಸಿತು. ಕುಶಾಕ್ ಬಿಡುಗಡೆ ಆದಾಗಿನಿಂದ ಈವರೆಗೆ 10 ಸಾವಿರಕ್ಕೂ ಅಧಿಕ ಬುಕಿಂಗ್ ಆಗಿದೆ.
ನಗರದ ಎಂ.ಜಿ. ರಸ್ತೆಯಲ್ಲಿರುವ ತಾಜ್ ಹೊಟೇಲ್ನಿಂದ ಶಿಲ್ಹಾಂದರ ರೆಸಾರ್ಟ್ವರೆಗೆ ಈ ವಿಶೇಷ ಡ್ರೈವ್ ಆಯೋಜಿಸಲಾಗಿತ್ತು.10 ಕಾರುಗಳಲ್ಲಿ, ಪ್ರತಿ ಕಾರುಗಳಲ್ಲಿತಲಾ ನಾಲ್ವರು ಪ್ರಯಾಣಿಕರು ಹಾಗೂ ಸ್ಕೋಡಾ ಮತ್ತು ಡೀಲರ್ಶಿಪ್ನ 10 ಸದಸ್ಯರು ಪ್ರಯಾಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.