ಬೆಂಗಳೂರು: ಕೋಡಕ್ ಸ್ಮಾರ್ಟ್ ಟಿವಿ (ಎಚ್‌ಡಿ ಎಲ್‌ಇಡಿ) ತಯಾರಿಕಾ ಸಂಸ್ಥೆಯಾಗಿರುವ ಸೂಪರ್ ಪ್ಲಾಸ್ಟ್ರಾನಿಕ್ಸ್ (ಎಸ್‌ಪಿಪಿಎಲ್), ಬೆಂಗಳೂರಿನಲ್ಲಿ ತನ್ನ ಎರಡನೆ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಆರಂಭಿಸಲಿದೆ.
‘ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಕೈಗೆಟುಕುವ ದರದ ಸ್ಮಾರ್ಟ್ ಟಿವಿಗಳ ಮಾರಾಟ ವಹಿವಾಟಿನಲ್ಲಿ ತೊಡಗಿರುವ ಕಂಪನಿಯು ಮುಂದಿನ ವರ್ಷದ ವೇಳೆಗೆ ಈ ಶೇ 10ರಷ್ಟು ಮಾರುಕಟ್ಟೆ ವಶಪಡಿಸಿಕೊಳ್ಳಲು ಉದ್ದೇಶಿಸಿದೆ’ ಎಂದು ಕಂಪನಿಯ ಸಿಇಒ ಅವನೀತ್ ಸಿಂಗ್ ಮಾರ್ವಾ ಹೇಳಿದ್ದಾರೆ.
‘ಹಬ್ಬದ ಸಂದರ್ಭದಲ್ಲಿ ಸ್ಮಾರ್ಟ್ ಟಿವಿಗಳ ಮಾರಾಟ ಉತ್ತೇಜಿಸಲು ಕ್ಯಾಷ್‌ಬ್ಯಾಕ್, ಹಳೆ ಟಿವಿಗಳ ವಿನಿಮಯ, ವಾರಂಟಿ ವಿಸ್ತರಣೆ ಮತ್ತಿತರ ಕೊಡುಗೆಗಳನ್ನು ಘೋಷಿಸಲಾಗಿದೆ. ಯೂಟೂಬ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದಾದ ಸ್ಮಾರ್ಟ್ ಟಿವಿಗಳು ಅಗ್ಗದ ಬೆಲೆಗೆ ದೊರೆಯುತ್ತಿರುವುದು ಕೋಡಕ್ ಟಿವಿಯ ವೈಶಿಷ್ಟ್ಯಗಳಾಗಿವೆ. 32 ಇಂಚ್‌ನ ಸ್ಮಾರ್ಟ್ ಟಿವಿ ₹ 8,999ಕ್ಕೆ ಮತ್ತು 65 ಇಂಚ್‌ನ 4ಕೆ ಟಿವಿ 49,999 ಬೆಲೆಗೆ ದೊರೆಯಲಿವೆ.
‘ಬೆಂಗಳೂರು ಹೊರತುಪಡಿಸಿದರೆ ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತಿತರ ಪ್ರಮುಖ ನಗರಗಳಲ್ಲಿ ಕೋಡಕ್ ಟಿವಿಗಳಿಗೆ ಉತ್ತಮ ಮಾರುಕಟ್ಟೆ ಇದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟವೂ ಚೆನ್ನಾಗಿದೆ. ವರ್ಷದಿಂದ ವರ್ಷಕ್ಕೆ ವಹಿವಾಟು ಶೇ 100ರಷ್ಟು ಪ್ರಗತಿ ದಾಖಲಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.