ಬೆಂಗಳೂರು: ಗ್ರಾಹಕರ ಅನುಕೂಲಕ್ಕಾಗಿ ಕೋಟಕ್ ಮಹೀಂದ್ರ ಬ್ಯಾಂಕ್ ‘ಸ್ಮಾರ್ಟ್ ಚಾಯ್ಸ್’ ಚಿನ್ನದ ಸಾಲ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯು ಮಾಸಿಕ ಶೇ 0.88ರಷ್ಟು ನಿಶ್ಚಿತ ಬಡ್ಡಿ, ಅಂದೇ ಸಾಲ ವಿತರಣೆ, ಶೂನ್ಯ ಸಂಸ್ಕರಣಾ ಶುಲ್ಕ, ಪರಿವರ್ತನೀಯ ಮರುಪಾವತಿ ಆಯ್ಕೆ ಹಾಗೂ ಕನಿಷ್ಠ ದಾಖಲೆ ನೀಡುವಂತಹ ಅವಕಾಶವನ್ನು ಒದಗಿಸಿದೆ.
ಈ ಸ್ಮಾರ್ಟ್ ಚಾಯ್ಸ್ ಗೋಲ್ಡ್ ಸಾಲವು ₹4 ಲಕ್ಷ ಮೇಲ್ಪಟ್ಟ ಮತ್ತು 12 ತಿಂಗಳ ಅವಧಿಯದ್ದಾಗಿದೆ. ಈ ಸಾಲದ ಮೊತ್ತಕ್ಕೆ ಶೇ 0.88ರಷ್ಟು ನಿಶ್ಚಿತ ಮಾಸಿಕ ಬಡ್ಡಿದರ ವಿಧಿಸಲಾಗುತ್ತದೆ. ಈ ಕೊಡುಗೆಯು ಮುಂಬರುವ ಮೇ 31ರ ವರೆಗೆ ಮಾನ್ಯವಾಗಿರುತ್ತದೆ. ಸಾಲವು ಸಂಪೂರ್ಣವಾಗಿ ಬ್ಯಾಂಕ್‌ನ ಷರತ್ತುಗಳು ಮತ್ತು ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
‘ಈ ಚಿನ್ನದ ಸಾಲ ಯೋಜನೆಯು ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ. ಇತರೆ ಸಾಲಗಳಿಗೆ ಹೋಲಿಸಿದರೆ ಜನರು ದುಬಾರಿಯಲ್ಲದ ಆಯ್ಕೆಯನ್ನಾಗಿ ಪರಿಗಣಿಸುತ್ತಿದ್ದಾರೆ’ ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ನ ರಿಟೇಲ್ ಕೃಷಿ ಮತ್ತು ಚಿನ್ನದ ಸಾಲ ವಿಭಾಗದ ಅಧ್ಯಕ್ಷ ಶ್ರೀಪಾದ್ ಜಾಧವ್ ಹೇಳಿದ್ದಾರೆ.
‘ಗ್ರಾಹಕರ ಚಿನ್ನವು ಬ್ಯಾಂಕ್ ಬಳಿ ಭದ್ರವಾಗಿ ಇರುತ್ತದೆ. ಈ ಯೋಜನೆಯು ಸ್ಮಾರ್ಟ್ ಹಾಗೂ ಸುರಕ್ಷಿತ ಆಯ್ಕೆಯಾಗಿದೆ. ಗ್ರಾಹಕರು ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು, ಅವರ ಅಗತ್ಯಕ್ಕೆ ಸರಿಹೊಂದುವಂತ ಹಣಕಾಸು ಆಯ್ಕೆಯೂ ಆಗಿದೆ. ಈ ಯೋಜನೆಯು ಮಾರ್ಚ್ 1ರಿಂದ ಆರಂಭಗೊಂಡಿದ್ದು, ದೇಶದಲ್ಲಿರುವ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲೂ ಲಭ್ಯವಿದೆ’ ಎಂದು ಬ್ಯಾಂಕ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ರೋಹಿತ್ ಭಾಸಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.