ADVERTISEMENT

ಕೋಟಕ್ ಮಹೀಂದ್ರ ಬ್ಯಾಂಕ್‌, ಐಸಿಐಸಿಐ, ಯುಬಿಐ ಲಾಭ ಹೆಚ್ಚಳ

ಪಿಟಿಐ
Published 20 ಜನವರಿ 2024, 16:16 IST
Last Updated 20 ಜನವರಿ 2024, 16:16 IST
   

ಮುಂಬೈ: 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಇಂಡಿಯಾದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. 

ಕೋಟಕ್ ಮಹೀಂದ್ರ ಬ್ಯಾಂಕ್‌ನ ಲಾಭದಲ್ಲಿ ಶೇ 6.75ರಷ್ಟು ಏರಿಕೆಯಾಗಿದೆ. 2022–23ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹3,995 ಕೋಟಿ ಲಾಭಗಳಿಸಿತ್ತು. 2023–24ರ ಅವಧಿಯಲ್ಲಿ ₹4,264 ಕೋಟಿಗೆ ಏರಿಕೆಯಾಗಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ವರಮಾನವು ₹10,947 ಕೋಟಿಯಿಂದ ₹14,096 ಕೋಟಿಗೆ ಏರಿಕೆ ಕಂಡಿದೆ. ನಿರ್ವಹಣಾ ವೆಚ್ಚವು ₹3,751 ಕೋಟಿಯಿಂದ ₹4,284 ಕೋಟಿಗೆ ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಸ್ಥಿರವಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ನಿವ್ವಳ ಎನ್‌ಪಿಎ ಶೇ 1.72ರಷ್ಟು ಇತ್ತು. ಈ ಅವಧಿಯಲ್ಲಿ ಶೇ 1.73ಕ್ಕೆ ಏರಿಕೆಯಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿ ಅನ್ವಯ ಈ ತ್ರೈಮಾಸಿಕದಲ್ಲಿ ₹190.13 ಕೋಟಿಯನ್ನು ನಿರ್ದಿಷ್ಟ ಉದ್ದೇಶಕ್ಕೆ ಸ್ಥಾಪಿಸಲಾಗುವ ಪರ್ಯಾಯ ಹೂಡಿಕೆ ನಿಧಿಯಲ್ಲಿ (ಎಐಎಫ್‌) ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದೆ.‌‌

ಐಸಿಐಸಿಐ ಬ್ಯಾಂಕ್‌ ಲಾಭ ವೃದ್ಧಿ

ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 25.7ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹8,792.42 ಕೋಟಿ ಆದಾಯ ಗಳಿಸಿತ್ತು. 2023–24ರ ಅವಧಿಯಲ್ಲಿ ₹11,052 ಕೋಟಿಗೆ ಏರಿಕೆಯಾಗಿದೆ. ನಿವ್ವಳ ಬಡ್ಡಿ ವರಮಾನವು ಶೇ 13.4ರಷ್ಟು ಹೆಚ್ಚಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.