ADVERTISEMENT

ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:58 IST
Last Updated 25 ಏಪ್ರಿಲ್ 2024, 15:58 IST
.....
.....   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರಿರುವ ಬೆನ್ನಲ್ಲೇ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯವು ಗುರುವಾರ ಶೇ 12ರಷ್ಟು ಕುಸಿದಿದೆ. 

ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯವು ₹39,768 ಕೋಟಿಯಷ್ಟು ಕರಗಿದೆ. 

ಬಿಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 10.85ರಷ್ಟು ಕುಸಿತ ಕಂಡಿದ್ದು, ಪ್ರತಿ ಷೇರಿನ ಬೆಲೆ ₹1,643 ಆಗಿದೆ. ದಿನದ ವಹಿವಾಟಿನ ಒಂದು ಸಂದರ್ಭದಲ್ಲಿ ಶೇ 12.10ರಷ್ಟು ಕುಸಿತ ಕಂಡಿತ್ತು. 

ADVERTISEMENT

ಎನ್‌ಎಸ್ಇಯಲ್ಲಿ ಷೇರಿನ ಮೌಲ್ಯವು ಶೇ 10.73ರಷ್ಟು ಕುಸಿತ ಕಂಡಿದ್ದು, ಪ್ರತಿ ಷೇರಿನ ಬೆಲೆಯು ₹1,645 ಆಗಿದೆ. ಒಂದು ಹಂತದಲ್ಲಿ ಶೇ 13ರಷ್ಟು ಕುಸಿತ ಕಂಡಿತ್ತು. ಸದ್ಯ ಕಂಪನಿಯ ಒಟ್ಟು ಎಂ–ಕ್ಯಾಪ್‌ ₹3.26 ಲಕ್ಷ ಕೋಟಿ ಆಗಿದೆ.

4ನೇ ಸ್ಥಾನಕ್ಕೆ ಜಿಗಿದ ಎಕ್ಸಿಸ್‌ ಬ್ಯಾಂಕ್: 

ಕೋಟಕ್‌ ಬ್ಯಾಂಕ್‌ನ ಷೇರುಗಳ ಕುಸಿತವು ಎಕ್ಸಿಕ್‌ ಬ್ಯಾಂಕ್‌ ಪಾಲಿಗೆ ವರದಾನವಾಗಿದ್ದು, ದೇಶದಲ್ಲಿ ಅತಿಹೆಚ್ಚು ಎಂ–ಕ್ಯಾಪ್‌ ಹೊಂದಿದ ನಾಲ್ಕನೇ ಬ್ಯಾಂಕ್‌ ಆಗಿ ಹೊರಹೊಮ್ಮಿದೆ. ಎಕ್ಸಿಸ್‌ ಬ್ಯಾಂಕ್‌ನ ಒಟ್ಟು ಎಂ–ಕ್ಯಾಪ್‌ ₹3.38 ಲಕ್ಷ ಕೋಟಿ ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿದ್ದು, ಪ್ರಥಮ ಸ್ಥಾನದಲ್ಲಿದೆ. ಐಸಿಐಸಿಐ ಬ್ಯಾಂಕ್‌ ದ್ವಿತೀಯ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.