ಬೆಂಗಳೂರು: ಕೋಟಕ್ ಮ್ಯೂಚುವಲ್ ಫಂಡ್, ‘ಕೋಟಕ್ ಬ್ಯಾಲನ್ಸ್ಡ್ ಅಡ್ವಾಂಟೇಚ್ ಫಂಡ್’ಗೆ ಚಾಲನೆ ನೀಡಿದೆ.
ಈ ‘ಹೊಸ ಫಂಡ್ ಕೊಡುಗೆ’ಯಲ್ಲಿನ (ಎನ್‌ಎಫ್‌ಒ) ಹೂಡಿಕೆಯು ಇದೇ 13ರಿಂದ (ಶುಕ್ರವಾರ) ಆರಂಭವಾಗಿ 27ಕ್ಕೆ ಕೊನೆಗೊಳ್ಳಲಿದೆ. ಪ್ರತಿ ಯೂನಿಟ್‌ನ ಮುಖಬೆಲೆ ₹ 10 ಆಗಿದ್ದು, ಕನಿಷ್ಠ ಹೂಡಿಕೆ ₹ 5 ಸಾವಿರ. ಮಾರಾಟ ಮತ್ತು ಮರು ಖರೀದಿ ಆಗಸ್ಟ್ 10ರಿಂದ ಜಾರಿಗೆ ಬರಲಿದೆ.
‘ಮಾರುಕಟ್ಟೆ ಸಾಗುವ ದಿಕ್ಕು ಮತ್ತು ಮೌಲ್ಯಕ್ಕೆ ಅನುಗುಣವಾಗಿ ಈ ಫಂಡ್ ರೂಪಿಸಲಾಗಿದೆ. ಎಲ್ಲ ಬಗೆಯ ಹೂಡಿಕೆದಾರರಿಗೆ ಇದು ಸೂಕ್ತವಾಗಿರಲಿದೆ. ಈ ‘ಎನ್‌ಎಫ್‌ಒ’ ಮೂಲಕ ₹ 2,000 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ’ ಎಂದು ಸಂಸ್ಥೆಯ ಮುಖ್ಯ ಹೂಡಿಕೆ ಅಧಿಕಾರಿ ಹರ್ಷ ಉಪಾಧ್ಯಾಯ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.