ನವದೆಹಲಿ: ಸಹಕಾರಿ ಗೊಬ್ಬರ ತಯಾರಿಕಾ ಸಂಸ್ಥೆ ಕೃಷಿಕ್ ಭಾರತಿ ಕೋ–ಆಪರೇಟಿವ್ ಲಿಮಿಟೆಡ್ (ಕ್ರಿಭ್ಕೋ), ಜಾಗತಿಕ ಸಂಸ್ಥೆ ನೊವೊನೆಸಿಸ್ ಸಹಭಾಗಿತ್ವದಲ್ಲಿ ‘ಕೆಆರ್‌ಐಬಿಸಿಒ ರೈಜೋಸೂಪರ್‘ ಎಂಬ ಹೊಸ ಜೈವಿಕ ಗೊಬ್ಬರವನ್ನು ಸೋಮವಾರ ಬಿಡುಗಡೆ ಮಾಡಿದೆ.
ಈ ಉತ್ಪನ್ನವನ್ನು ಮುಂಬರಲಿರುವ ಚಳಿಗಾಲದ ಬೆಳೆಗೆ ರೈತರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಪ್ರತಿ ಎಕರೆಗೆ ₹500ರಿಂದ ₹550 ಬೆಲೆಯ ಗೊಬ್ಬರ ಬೇಕಾಗುತ್ತದೆ.
ಭತ್ತ, ಗೋಧಿ, ಬೇಳೆಕಾಳು ಸೇರಿ ವಿವಿಧ ಬೆಳೆಗಳಿಗೆ ಬಳಸಬಹುದಾಗಿದೆ. ಸಸ್ಯಗಳ ಆರಂಭಿಕ ಹಂತದಲ್ಲಿ ಇದನ್ನು ಬಳಸಬಹುದಾಗಿದೆ. ಈ ಉತ್ಪನ್ನವನ್ನು ಗೋಧಿ, ಟೊಮೆಟೊ ಮತ್ತು ಮೆಣಸಿನಕಾಯಿ ಬೆಳೆ ಮೇಲೆ ಪರೀಕ್ಷೆ ನಡೆಸಲಾಗಿದೆ. ಕ್ರಿಭ್ಕೋ ಇದನ್ನು ತಯಾರಿಸಲಿದೆ. ವಾರ್ಷಿಕ 20 ಸಾವಿರ ಟನ್‌ನಷ್ಟು ತಯಾರಿಕೆಯ ಗುರಿ ಹೊಂದಿದೆ ಎಂದು ನೊವೊನೆಸಿಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.