ADVERTISEMENT

ಡಿಜಿಟಲ್ ಸೇವೆ: ಚೀನಾಕ್ಕಿಂತ ಭಾರತ ಮುಂದು –ಕೆ.ವಿ. ಕಾಮತ್

ಪಿಟಿಐ
Published 7 ಸೆಪ್ಟೆಂಬರ್ 2023, 21:23 IST
Last Updated 7 ಸೆಪ್ಟೆಂಬರ್ 2023, 21:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಚೀನಾದ ಬ್ಯಾಂಕ್‌ಗಳು ಡಿಜಿಟಲ್ ಪಯಣವನ್ನು ಬಹಳ ಬೇಗ ಶುರುಮಾಡಿದ್ದರೂ, ಅವು ಈಗ ಭಾರತದ ಬ್ಯಾಂಕ್‌ಗಳಿಗಿಂತ ಹಿಂದುಳಿದಿವೆ ಎಂದು ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌ನ ಅಧ್ಯಕ್ಷ ಕೆ.ವಿ. ಕಾಮತ್ ಹೇಳಿದ್ದಾರೆ.

‘ಭಾರತದಲ್ಲಿ ಆಗಿರುವುದು ಹಾಗೂ ಚೀನಾದಲ್ಲಿ ಆಗಿರುವುದರ ನಡುವೆ ಬಹಳ ವ್ಯತ್ಯಾಸಗಳಿವೆ ಎಂಬುದು ನನ್ನ ಭಾವನೆ’ ಎಂದು ಜಾಗತಿಕ ಫಿನ್‌ಟೆಕ್‌ ಸಮಾವೇಶದಲ್ಲಿ ಹೇಳಿದ್ದಾರೆ.

ADVERTISEMENT

‘ಚೀನಾದವರು ಆಲಿಪೇ ಮತ್ತು ವಿಚ್ಯಾಟ್‌ ಪೇ ಮೂಲಕ ಬಹಳ ಬೇಗ ಡಿಜಿಟಲ್ ಪಾವತಿ ಸೇವೆಗಳನ್ನು ಆರಂಭಿಸಿದರು. ಆದರೆ ಅಲ್ಲಿನ ಬ್ಯಾಂಕ್‌ಗಳು ಈಗ ಭಾರತದ ಬ್ಯಾಂಕ್‌ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಂಡಿವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.