ADVERTISEMENT

ಖಾದಿ–ಗ್ರಾಮೋದ್ಯೋಗ: ದಾಖಲೆ ವಹಿವಾಟು

ಪಿಟಿಐ
Published 9 ಜುಲೈ 2024, 15:58 IST
Last Updated 9 ಜುಲೈ 2024, 15:58 IST
ಕೆವಿಐಸಿ
ಕೆವಿಐಸಿ   

ನವದೆಹಲಿ: ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು (ಕೆವಿಐಸಿ) 2023–24ನೇ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ₹1.55 ಲಕ್ಷ ಕೋಟಿಯಷ್ಟು ದಾಖಲೆ ವಹಿವಾಟು ನಡೆಸಿದೆ. ಹೊಸದಾಗಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಮಂಡಳಿಯ ಅಧ್ಯಕ್ಷ ಮನೋಜ್‌ ಕುಮಾರ್‌ ಮಂಗಳವಾರ ಹೇಳಿದ್ದಾರೆ.

ಈ ಅವಧಿಯಲ್ಲಿ ಉತ್ಪಾದನೆ ಪ್ರಮಾಣದಲ್ಲಿ ಶೇ 315ರಷ್ಟು ಏರಿಕೆಯಾಗಿದೆ. ಮಾರಾಟದಲ್ಲಿ ಶೇ 400ರಷ್ಟು ಮತ್ತು ಹೊಸ ಉದ್ಯೋಗಾವಕಾಶ ಸೃಷ್ಟಿಯಲ್ಲಿ ಶೇ 81ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

2022–23ರಲ್ಲಿ ಮಂಡಳಿಯ ಉತ್ಪನ್ನಗಳ ಮಾರಾಟದ ವಹಿವಾಟು ₹1.34 ಲಕ್ಷ ಕೋಟಿ ಇತ್ತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಉತ್ಪನ್ನಗಳ ಮಾರಾಟದ ಮೌಲ್ಯವು ₹31,154 ಕೋಟಿಯಿಂದ ₹1.55 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಇದು ಗ್ರಾಮೀಣ ಆರ್ಥಿಕತೆಯ ಸದೃಢತೆಗೆ ನೆರವಾಗಿದೆ ಎಂದು ಹೇಳಿದ್ದಾರೆ.

ಸಾಂಕೇತಿಕ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.