ನವದೆಹಲಿ: ಎಲ್‌ಆ್ಯಂಡ್‌ಟಿ ಕಂಪನಿಯ ಜೂನ್ ತ್ರೈಮಾಸಿಕದ ನಿವ್ವಳ ಲಾಭವು ಶೇಕಡ 44.9ರಷ್ಟು ಹೆಚ್ಚಾಗಿದ್ದು, ₹ 1,702 ಕೋಟಿಗೆ ತಲುಪಿದೆ. ಕಂಪನಿಯು ಕಾರ್ಯಾಚರಣೆಯಲ್ಲಿ ಹೆಚ್ಚಿನ ಆದಾಯ ಸಂಗ್ರಹಿಸಲು ಸಾಧ್ಯವಾದ ಕಾರಣ ಲಾಭದ ಪ್ರಮಾಣ ಜಾಸ್ತಿಯಾಗಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 1,174 ಕೋಟಿ ನಿವ್ವಳ ಲಾಭ ಕಂಡಿತ್ತು.
ಏಪ್ರಿಲ್–ಜೂನ್ ಅವಧಿಯಲ್ಲಿ ಕಂಪನಿಯು ಕಾರ್ಯಾಚರಣೆಗಳಿಂದ ಒಟ್ಟು ₹ 35 ಸಾವಿರ ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 29 ಸಾವಿರ ಕೋಟಿ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.