ನವದೆಹಲಿ (ಪಿಟಿಐ): ನಿರುದ್ಯೋಗ ಹೆಚ್ಚಾಗಿದೆ ಎನ್ನುವ, ಸಮೀಕ್ಷೆಯನ್ನು ಆಧರಿಸಿದ ಸುದ್ದಿಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಅಲ್ಲಗಳೆದಿದೆ. ಹಲವು ಖಾಸಗಿ ಸಂಸ್ಥೆಗಳು ತಮ್ಮದೇ ಆದ ಮಾದರಿ ಅನುಸರಿಸಿ ಇಂತಹ ಸಮೀಕ್ಷೆ ನಡೆಸುತ್ತವೆ, ಇವು ಸಾಮಾನ್ಯವಾಗಿ ವೈಜ್ಞಾನಿಕವಾಗಿರುವುದಿಲ್ಲ, ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿಯೂ ಇರುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ಆದರೆ, ಸಚಿವಾಲಯವು ಯಾವುದೇ ನಿರ್ದಿಷ್ಟ ವರದಿ ಅಥವಾ ಸಂಸ್ಥೆಯ ಹೆಸರನ್ನು ಉಲ್ಲೇಖಿಸಿಲ್ಲ. 2022ರ ಡಿಸೆಂಬರ್‌ನಲ್ಲಿ ನಿರುದ್ಯೋಗ ಪ್ರಮಾಣವು ಹೆಚ್ಚಾಗಿದೆ ಎಂಬ ವರದಿಯನ್ನು, ಖಾಸಗಿ ಸಂಸ್ಥೆಯೊಂದರ ಸಮೀಕ್ಷೆಯನ್ನು ಆಧರಿಸಿ ಕೆಲವು ಮಾಧ್ಯಮಗಳು ಪ್ರಕಟಿಸಿವೆ ಎಂದು ಸಚಿವಾಲಯ ಹೇಳಿದೆ.
ಇಂತಹ ಸಂಸ್ಥೆಗಳು ಅನುಸರಿಸುವ ಮಾದರಿಯು ಸಾಮಾನ್ಯವಾಗಿ ನಿಷ್ಪಕ್ಷಪಾತವಾಗಿ ಇರುವುದಿಲ್ಲ. ಅವು ನಿರುದ್ಯೋಗವನ್ನು ಹೆಚ್ಚಾಗಿ ಹೇಳುವ, ಉದ್ಯೋಗ ಪ್ರಮಾಣವನ್ನು ಕಡಿಮೆ ಹೇಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಅವು ಅನುಸರಿಸುವ ಅಧ್ಯಯನ ವಿಧಾನವೂ ಒಂದು ಕಾರಣವಾಗಿರುತ್ತದೆ ಎಂದು ಸಚಿವಾಲಯ ವಿವರಿಸಿದೆ.
ಡಿಸೆಂಬರ್‌ನಲ್ಲಿ ನಿರುದ್ಯೋಗ ಪ್ರಮಾಣವು ಶೇ 8.3ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.