ನವದೆಹಲಿ: ಎಲ್‌ಇಡಿ ಬಲ್ಬ್ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಲ್ಬ್‌ಗಳ ಬೆಲೆಯಲ್ಲಿ ಶೇಕಡ 5ರಿಂದ ಶೇ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
‘ಎಲ್‌ಇಡಿ ಬಲ್ಪ್ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಮೇಲಿನ ಸುಂಕ ಹೆಚ್ಚಿಸುವ ಸರ್ಕಾರದ ತೀರ್ಮಾನದಿಂದಾಗಿ, ಬಲ್ಬ್ ಬೆಲೆಯಲ್ಲಿ ಹೆಚ್ಚಳ ಆಗಲಿದೆ. ಬಲ್ಬ್ ತಯಾರಿಕೆಗೆ ಬೇಕಾಗುವ ಬಹುತೇಕ ವಸ್ತುಗಳು ಈಗಲೂ ವಿದೇಶಗಳಿಂದ ಆಮದಾಗುತ್ತಿವೆ’ ಎಂದು ಎಲೆಕ್ಟ್ರಿಕ್ ಲ್ಯಾಂಪ್ ಮತ್ತು ಬಿಡಿಭಾಗ ತಯಾರಕರ ಸಂಘದ ಅಧ್ಯಕ್ಷ ಸುಮಿತ್ ಜೋಷಿ ತಿಳಿಸಿದರು.
‘ಎಲ್‌ಇಡಿ ಬಲ್ಬ್ ತಯಾರಿಕೆಗೆ ಬೇಕಿರುವ ಕೆಲವು ಎಲೆಕ್ಟ್ರಾನಿಕ್ಸ್ ವಸ್ತುಗಳ ಸ್ಥಳೀಯ ಉತ್ಪಾದನೆ ಇಲ್ಲವಾಗಿರುವ ಕಾರಣ, ಚೀನಾ, ದಕ್ಷಿಣ ಕೊರಿಯಾ, ವಿಯೆಟ್ನಾಂಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾವೆಲ್ಸ್ ಇಂಡಿಯಾ ಕಂಪನಿಯ ಹಿರಿಯ ಉಪಾಧ್ಯಕ್ಷ ಪರಾಗ್ ಭಟ್ನಾಗರ್ ಹೇಳಿದರು.
ಇದನ್ನೂ ಓದಿ:ಸಬ್ಸಿಡಿ ಇಲ್ಲದ ಎಲ್ಪಿಜಿ ಬೆಲೆ ₹25ರಷ್ಟು ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.