ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಕರೆಗೆ ಅನುಗುಣವಾಗಿ, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕಂಪನಿಯು ತನ್ನ ಕೆಲವು ರೆಫ್ರಿಜರೇಟರ್‌ಗಳ ತಯಾರಿಕೆಯನ್ನು ಭಾರತದಲ್ಲಿಯೇ ಮಾಡಲಾರಂಭಿಸಿದೆ. ಇತರ ಕೆಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಕೂಡ ಕಂಪನಿಯು ಭಾರತದಲ್ಲಿಯೇ ತಯಾರಿಸುತ್ತಿದೆ.
ಕಂಪನಿಯು ಪುಣೆಯಲ್ಲಿ ಇರುವ ತನ್ನ ತಯಾರಿಕಾ ಘಟಕದಲ್ಲಿ ಕೆಲವು ಮಾದರಿಗಳ ರೆಫ್ರಿಜರೇಟರ್‌ಗಳ ತಯಾರಿಕೆ ಆರಂಭಿಸಿದೆ. ಈ ಘಟಕದಲ್ಲಿ ಕಂಪನಿಯು ಅಂದಾಜು ₹ 200 ಕೋಟಿ ಹೂಡಿಕೆ ಮಾಡಿದೆ.
ಕಂಪನಿಯು ಇಲ್ಲಿ ಪ್ರತಿ ವರ್ಷ 2 ಲಕ್ಷ ರೆಫ್ರಿಜರೇಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿ ಮೋದಿ ಅವರು ನೀಡಿರುವ ‘ಭಾರತದಲ್ಲಿಯೇ ತಯಾರಿಸಿ’ ಕರೆಗೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಂಗ್ ಜು ಜಿಯಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.