ADVERTISEMENT

ಲಿಬರ್ಟಿ ಲೈಫ್‌ಸ್ಟೈಲ್‌ನಿಂದ ಸುಗಂಧದ್ರವ್ಯ ಮಾರಾಟ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:08 IST
Last Updated 16 ಜನವರಿ 2019, 18:08 IST
ಲಿಬರ್ಟಿ ಲೈಫ್‌ಸ್ಟೈಲ್‌ ಸುಗಂಧದ್ರವ್ಯ
ಲಿಬರ್ಟಿ ಲೈಫ್‌ಸ್ಟೈಲ್‌ ಸುಗಂಧದ್ರವ್ಯ   

ಬೆಂಗಳೂರು: ಪಾದರಕ್ಷೆಗಳ ಜನಪ್ರಿಯ ಬ್ರ್ಯಾಂಡ್‌ ಆಗಿರುವ ಲಿಬರ್ಟಿ, ಈಗ ಜೀವನಶೈಲಿಯ ರಿಟೇಲ್‌ ವಹಿವಾಟಿಗೆ ಪ್ರವೇಶಿಸಿದ್ದು, ಸುಗಂಧದ್ರವ್ಯಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಲಿಬರ್ಟಿ ಲೈಫ್‌ಸ್ಟೈಲ್‌ ಬ್ರ್ಯಾಂಡ್‌ ಹೆಸರಿನಲ್ಲಿ 12 ಬಗೆಯ ಸುಗಂಧ ದ್ರವ್ಯಗಳನ್ನು ಪರಿಚಯಿಸಿದೆ. ಲಿಬರ್ಟಿ ಷೂಸ್‌ ಲಿಮಿಟೆಡ್‌ ಮತ್ತು ಲಿಬರ್ಟಿ ಲೈಫ್‌ಸ್ಟೈಲ್‌ನ ಸಿಇಒ ಆದೇಶ್‌ ಗು‍ಪ್ತ ಅವರು ಈ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ್ದಾರೆ.

ನಗರದಲ್ಲಿನ ಲಿಬರ್ಟಿ ಮಳಿಗೆಗಳಲ್ಲಿ ಮತ್ತು ಇ–ಕಾಮರ್ಸ್ ತಾಣಗಳಾದ ಅಮೆಜಾನ್, ಮಿಂತ್ರಾ ಮತ್ತಿತರ ಕಡೆಗಳಲ್ಲಿಯೂ ಈ ಸುಗಂಧದ್ರವ್ಯಗಳು ಖರೀದಿಗೆ ಲಭ್ಯ ಇವೆ. ಬೆಲೆ ₹ 1,699 ರಿಂದ ₹ 2,499ರವರೆಗೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.