ADVERTISEMENT

ಎಲ್‌ಐಸಿ, ಅಂಚೆ ಇಲಾಖೆ ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:49 IST
Last Updated 28 ಸೆಪ್ಟೆಂಬರ್ 2021, 16:49 IST
   

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಜೀವ ವಿಮೆ ಪಾಲಿಸಿ ಖರೀದಿಸುವವರಿಗೆ ನೀಡುವ ಪುಸ್ತಿಕೆಯನ್ನು ಮುದ್ರಿಸಿ, ಅದನ್ನು ರವಾನೆ ಮಾಡುವ ಹೊಣೆಯನ್ನು ಅಂಚೆ ಇಲಾಖೆ ವಹಿಸಿಕೊಂಡಿದೆ.

ಈ ವಿಚಾರವಾಗಿ ಎಲ್‌ಐಸಿ ಮತ್ತು ಅಂಚೆ ಇಲಾಖೆ ನಡುವೆ ಒಪ್ಪಂದ ಆಗಿದೆ. ಎಲ್‌ಐಸಿ ಅಧ್ಯಕ್ಷ ಎಂ.ಆರ್. ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಲ್‌ಐಸಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT