ADVERTISEMENT

ಜಿಎಸ್‌ಟಿ ಬಾಕಿ: ಎಲ್ಐಸಿಗೆ ನೋಟಿಸ್

ಪಿಟಿಐ
Published 31 ಅಕ್ಟೋಬರ್ 2024, 14:19 IST
Last Updated 31 ಅಕ್ಟೋಬರ್ 2024, 14:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2017–18ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ₹65 ಕೋಟಿ ಬಾಕಿ ತೆರಿಗೆ ಪಾವತಿಸುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯಿಂದ ನೋಟಿಸ್‌ ಸ್ವೀಕರಿಸಲಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಿಳಿಸಿದೆ.

ಈ ಬಾಕಿ ಮೊತ್ತದಲ್ಲಿ ದಂಡ ಹಾಗೂ ಬಡ್ಡಿ ಮೊತ್ತ ₹6.5 ಕೋಟಿಯೂ ಸೇರಿದೆ. ಜಾರ್ಖಂಡ್‌ನ ಜಿಎಸ್‌ಟಿ ವಿಭಾಗವು ನೋಟಿಸ್‌ ನೀಡಿದೆ. ಇದು ನಿಗಮದ ಹಣಕಾಸು ವಹಿವಾಟು ಹಾಗೂ ಇತರೆ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಲ್‌ಐಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT