ADVERTISEMENT

ಐಡಿಬಿಐ ಬ್ಯಾಂಕ್‌ನಲ್ಲಿ ಒಂದಿಷ್ಟು ಷೇರು ಇರಲಿದೆ: ಎಲ್‌ಐಸಿ

ಪಿಟಿಐ
Published 27 ನವೆಂಬರ್ 2023, 16:12 IST
Last Updated 27 ನವೆಂಬರ್ 2023, 16:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬ್ಯಾಂಕ್‌ ಇನ್ಶುರೆನ್ಸ್‌ ಪ್ರಯೋಜಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಐಡಿಬಿಐ ಬ್ಯಾಂಕ್‌ನಲ್ಲಿ ಒಂದಿಷ್ಟು ಷೇರುಪಾಲನ್ನು ಉಳಿಸಿಕೊಳ್ಳಲಾಗುವುದು ಎಂದು ಎಲ್‌ಐಸಿ ಸೋಮವಾರ ಹೇಳಿದೆ.

‘ಬ್ಯಾಂಕ್‌ ಇನ್ಶುರೆನ್ಸ್‌ ವಿಭಾಗದಲ್ಲಿ ಐಡಿಬಿಐ ಬ್ಯಾಂಕ್‌ ಎಲ್‌ಐಸಿಯ ನಂಬರ್ 1 ಪಾಲುದಾರ ಆಗಿದೆ ಎನ್ನುವುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಹೀಗಾಗಿ ಈ ಪಾಲುದಾರಿಕೆ ಮುಂದುವರಿಸುವ ಸಲುವಾಗಿ ಬ್ಯಾಂಕ್‌ನಲ್ಲಿ ಒಂದಿಷ್ಟು ಷೇರುಪಾಲನ್ನು ಉಳಿಸಿಕೊಳ್ಳಲಾಗುವುದು’ ಎಂದು ಕಂಪನಿಯ ಅಧ್ಯಕ್ಷ ಸಿದ್ದಾರ್ಥ ಮೋಹಂತಿ ತಿಳಿಸಿದ್ದಾರೆ.

ಐಡಿಬಿಐ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ ಶೇ45ರಷ್ಟು ಮತ್ತು ಎಲ್ಐಸಿ ಶೇ 49.24ರಷ್ಟು ಷೇರುಪಾಲು ಹೊಂದಿದೆ. ಕೇಂದ್ರ ಮತ್ತು ಎಲ್‌ಐಸಿ ಒಟ್ಟಾಗಿ ಶೇ 60.7ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.