ADVERTISEMENT

ಎಲ್‌ಐಸಿ ಮ್ಯೂಚುವಲ್‌ ಫಂಡ್‌: ಹೊಸ ಯೋಜನೆ ಪ್ರಕಟ

ಪಿಟಿಐ
Published 20 ಸೆಪ್ಟೆಂಬರ್ 2024, 15:18 IST
Last Updated 20 ಸೆಪ್ಟೆಂಬರ್ 2024, 15:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಭಾರತೀಯ ಜೀವ ವಿಮಾ (ಎಲ್‌ಐಸಿ) ಮ್ಯೂಚುವಲ್‌ ಫಂಡ್‌, ಹೊಸದಾಗಿ ಮ್ಯಾನುಫ್ಯಾಕ್ಚರಿಂಗ್‌ ಫಂಡ್‌ ಆರಂಭಿಸಿದೆ. ಇದು ಓಪನ್‌ ಎಂಡೆಡ್ ಈಕ್ವಿಟಿ ಯೋಜನೆಯಾಗಿದೆ. 

ಈ ನ್ಯೂ ಫಂಡ್‌ ಆಫರ್‌ನ (ಎನ್‌ಎಫ್‌ಒ) ಚಂದಾದಾರಿಕೆ ಪಡೆಯಲು ಅಕ್ಟೋಬರ್‌ 4ರ ವರೆಗೆ ಕಾಲಾವಕಾಶವಿದೆ. ಅಕ್ಟೋಬರ್‌ 11ರಂದು ಯೂನಿಟ್‌ಗಳನ್ನು ವಿತರಿಸಲಾಗುತ್ತದೆ. ನಿಫ್ಟಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಇಂಡೆಕ್ಸ್‌ನಡಿ ಈ ಫಂಡ್‌ ಇರಲಿದೆ ಎಂದು ಕಂಪನಿ ತಿಳಿಸಿದೆ.

‘ಭಾರತದ ಜಿಡಿಪಿ ಬೆಳವಣಿಗೆ ಉತ್ತಮವಾಗಿದೆ. ನಗರೀಕರಣ ವೇಗವಾಗಿ ಬೆಳೆಯುತ್ತಿದೆ. ದೇಶದಲ್ಲಿ ಮಧ್ಯಮ ವರ್ಗದ ಜನಸಂಖ್ಯೆ ಏರಿಕೆಯಾಗುತ್ತಿದೆ. ಸರ್ಕಾರವು ರಫ್ತಿಗೆ ಉತ್ತೇಜನ ನೀಡುತ್ತಿದೆ. ‘ಮೇಕ್‌ ಇನ್‌ ಇಂಡಿಯಾ’ದಡಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ತಯಾರಿಕಾ ಸರಕುಗಳಿಗೆ ಬೇಡಿಕೆ ಹೆಚ್ಚಿದೆ’ ಎಂದು ಎಲ್‌ಐಸಿ ಮ್ಯೂಚುವಲ್‌ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್‌.ಕೆ. ಝಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.