ADVERTISEMENT

ಎಲ್‌ಐಸಿಗೆ ₹10,461 ಕೋಟಿ ಲಾಭ

ಪಿಟಿಐ
Published 8 ಆಗಸ್ಟ್ 2024, 15:35 IST
Last Updated 8 ಆಗಸ್ಟ್ 2024, 15:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹10,461 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹9,544 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 10ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು ಗುರುವಾರ ಷೇರುಪೇಟೆಗೆ ತಿಳಿಸಿದೆ.

ಕಳೆದ ಜೂನ್‌ ತ್ರೈಮಾಸಿಕದಲ್ಲಿ ₹1.88 ಲಕ್ಷ ಕೋಟಿ ವರಮಾನ ಗಳಿಸಿತ್ತು. ಈ ಅವಧಿಯಲ್ಲಿ ₹2.10 ಲಕ್ಷ ಕೋಟಿ ಗಳಿಸಿದೆ. ಮೊದಲ ವರ್ಷದಲ್ಲಿ ಪ್ರೀಮಿಯಂ ಮೂಲಕ ₹7,470 ಕೋಟಿ ಮತ್ತು ನವೀಕರಣ ಪ್ರೀಮಿಯಂನಿಂದ ₹56,429 ಕೋಟಿ ಗಳಿಸಿದೆ.

ADVERTISEMENT

ಹೂಡಿಕೆ ಮೂಲಕ ಗಳಿಸಿರುವ ನಿವ್ವಳ ವರಮಾನ ₹96,183 ಕೋಟಿ ಆಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹90,309 ಕೋಟಿ ಗಳಿಸಲಾಗಿತ್ತು. ಸಾಲ ಮರು ಪಾವತಿಸುವ ಸಾಮರ್ಥ್ಯವು ಶೇ 1.89ರಿಂದ ಶೇ 1.99ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.