ನವದೆಹಲಿ: ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭವು ಐದು ಪಟ್ಟು ಹೆಚ್ಚಾಗಿದ್ದು, ₹13,191 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಲಾಭವು ₹2,409 ಕೋಟಿ ಆಗಿತ್ತು.
ಆದರೆ ಎಲ್‌ಐಸಿಯ ವರಮಾನವು ಕಡಿಮೆ ಆಗಿದೆ. ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹2.15 ಲಕ್ಷ ಕೋಟಿ ಇದ್ದ ವರಮಾನವು ಈ ಬಾರಿ ₹2.01 ಲಕ್ಷ ಕೋಟಿಗೆ ತಗ್ಗಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಎಲ್‌ಐಸಿ ಲಾಭವು ಹಲವು ಪಟ್ಟು ಹೆಚ್ಚಾಗಿದ್ದು, ₹35,997 ಕೋಟಿಗೆ ತಲುಪಿದೆ. ಹಿಂದಿನ ವರ್ಷದಲ್ಲಿ ಎಲ್‌ಐಸಿ ₹4,125 ಕೋಟಿ ಲಾಭ ದಾಖಲಿಸಿತ್ತು. ಎಲ್‌ಐಸಿ ಆಡಳಿತ ಮಂಡಳಿಯು ಪ್ರತಿ ಷೇರಿಗೆ ₹3ರ ಅಂತಿಮ ಲಾಭಾಂಶವನ್ನು ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.