ADVERTISEMENT

ಎಲ್‌ಐಸಿ ಷೇರು ಮೌಲ್ಯ ಶೇ 4ರಷ್ಟು ಏರಿಕೆ

ಪಿಟಿಐ
Published 22 ಡಿಸೆಂಬರ್ 2023, 16:15 IST
Last Updated 22 ಡಿಸೆಂಬರ್ 2023, 16:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಮೌಲ್ಯವು ಶುಕ್ರವಾರ ಸುಮಾರು ಶೇ 4ರಷ್ಟು ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಷೇರುಗಳು ಶೇ 7.25ರಷ್ಟು ಏರಿಕೆಯಾಗಿ, 52 ವಾರಗಳ ಗರಿಷ್ಠ ಮಟ್ಟವಾದ ₹820ಕ್ಕೆ ತಲುಪಿತು. ವಹಿವಾಟು ಕೊನೆಗೊಳ್ಳುವ ಹೊತ್ತಿಗೆ ₹793ಕ್ಕೆ ಇಳಿಯಿತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿಯಲ್ಲಿ ಕಂಪನಿಯ ಷೇರುಗಳು ಶೇ 3.62ರಷ್ಟು ಏರಿಕೆಯಾಗಿ ₹792ಕ್ಕೆ ಅಂತ್ಯಗೊಂಡಿತು. ಒಂದು ಸಂದರ್ಭದಲ್ಲಿ ಶೇ 7.39ರಷ್ಟು ಏರಿಕೆಯಾಗಿ, ₹821ಕ್ಕೆ ತಲುಪಿತ್ತು. ಇದು 52 ವಾರಗಳ ಗರಿಷ್ಠ ಮಟ್ಟ ಆಗಿತ್ತು. ಕಂಪನಿಯ ಮಾರುಕಟ್ಟೆ ಮೌಲ್ಯವು ₹18 ಸಾವಿರ ಕೋಟಿಯಷ್ಟು ಏರಿಕೆಯಾಗಿ ₹5 ಲಕ್ಷ ಕೋಟಿಗೆ ತಲುಪಿದೆ.

ADVERTISEMENT

ಕಂಪನಿಯ ಮಾರುಕಟ್ಟೆ ಮೌಲ್ಯವು 18,057.88 ಕೋಟಿ ರೂ.ಗೆ ಏರಿಕೆಯಾಗಿ 5,01,635.57 ಕೋಟಿ ರೂ.ಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.